ಬದುಕಿನ ಪಯಣದೊಂದಿಗೆ ಒಂದೊಳ್ಳೆ ಸಂದೇಶ ಸಾರುವ “ಯಾನ”

ನಟ ಜೈ ಜಗದೀಶ್ , ವಿಜಯಲಕ್ಷ್ಮಿ ಸಿಂಗ್ ದಂಪತಿ ಪುತ್ರಿಯರಾದ ವೈಭವಿ, ವೈನಿಧಿ, ಮೈಸಿರಿ ನಟನೆಯ ಯಾನ ಸಿನೆಮಾ ಯುವ ಜನತೆಗೆ ಅದರಲ್ಲೂ ಕಾಲೇಜು ತರುಣ – ತರುಣಿಯರು ಎಂಜಾಯ್ ಮಾಡಬಲ್ಲ ಸಿನೆಮಾ.

ಇಂದಿನ ಯುವ ಜನತೆಗೆ ಸ್ವಲ್ಪ ರೋಮ್ಯಾಂಟಿಕ್ ಆಗಿ, ತಮಾಷೆಯಾಗಿ ಜೀವನದ ಪಾಠವನ್ನು ಹೇಳುವಲ್ಲಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಗೆದ್ದಿದ್ದಾರೆ.

ಈಗಿನ ಸ್ಟೂಡೆಂಟ್ಸ್ ನ ಸ್ಟೈಲಿಶ್ ಲೈಫ್ ಸ್ಟೈಲ್ ಸಿನೆಮಾದಲ್ಲಿ ಕಾಣಬಹುದು. ಯಾನ ಮೂವರು ಹುಡುಗಿಯರ ಸುತ್ತ ಹೆಣೆಯಲಾದ ಚಿತ್ರ. ಈ ಮೂರು ಹುಡುಗಿರದ್ದೂ ಮೂರು ವಿಭಿನ್ನ ಕ್ಯಾರೆಕ್ಟರ್.

ಮಾಯ ( ವೈಭವಿ) ಗೆ ಸಂಗೀತವೇ ಸರ್ವಸ್ವ, ಬೋಲ್ಡ್ ಅಂಡ್ ಡೇರಿಂಗ್ ನಂದಿನಿ ( ವೈನಿಧಿ) ,ಸಿಟಿ ಲೈಫ್ ಬಯಸಿ ಬಂದ ಅಂಜಲಿ( ವೈಸಿರಿ). ಈ ಮೂವರ ಬಾಳಲ್ಲಿ ಮೂವರು ಹುಡುಗರು ಪರಿಚಯವಾಗುತ್ತಾರೆ. ನಂತರ ಅನಿರೀಕ್ಷಿತ ಬೆಳವಣಿಗೆಯಿಂದ ಮೂವರು ಹುಡುಗಿಯರು ಊರು ಬಿಡುತ್ತಾರೆ. ಅಕಸ್ಮಾತ್ ಆಗಿ ಒಂದೆಡೆ ಸೇರುತ್ತಾರೆ. ಇಲ್ಲಿಂದಲೇ ಬದುಕಿನ ಅರ್ಥ ಹೇಳುವ ಯಾನ ಶುರುವಾಗುತ್ತದೆ. ಈ ಯಾನದಲ್ಲಿ ಈ ಮೂವರು ಯಶಸ್ಸು ಸಾಧಿಸುತ್ತಾರಾ ಇಲ್ಲವಾ ಎಂಬುದನ್ನು ತಿಳಿಯಲು ನೀವು ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಬೇಕು .!

ವಿಜಯ ಲಕ್ಷ್ಮಿ ಅವರ ಪುತ್ರಿಯರ ನಟನೆಯನ್ನು ತೆರೆ ಮೇಲೆ ನೋಡಿದ ಮೇಲೆ ಖಂಡಿತವಾಗಿಯೂ ಇದು ಅವರ ಮೊದಲ ಚಿತ್ರ ಎನಿಸುವುದಿಲ್ಲ..! ಯಾಕೆಂದರೆ ಅಷ್ಟರಮಟ್ಟಿಗೆ ನಟನೆ ಹಾಗೂ ನೃತ್ಯದಲ್ಲಿ ಪಳಗಿದವರಂತೆ ಕಾಣಿಸುತ್ತಾರೆ.

ಅಭಿಷೇಕ್, ಚಕ್ರವರ್ತಿ ಮತ್ತು ಸುಮುಖ ಅವರ ಪಾತ್ರಕ್ಕೆ ಕಡಿಮೆ ಸ್ಪೇಸ್ ಆದರೂ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಸದುಪಯೋಗ ಪಡಿಸಿಕೊಂಡು ಹೊಸ ಭರವಸೆ ಮೂಡಿಸಿದ್ದಾರೆ.

ವಿಜಯ ಲಕ್ಷ್ಮಿ ಅವರ ಡೈರೆಕ್ಷನ್ ಎಂದಿನಂತೆ ಮನೋಜ್ಞವಾಗಿದೆ. ಕರಂ ಚಾವ್ಲಾ ಅವರ ಛಾಯಾಗ್ರಹಣ ಕಣ್ಮನ ಸೆಳೆಯುತ್ತದೆ. ಜೋಷ್ವ ಅವರ ಸಂಗೀತ ಇಷ್ಟವಾಗುತ್ತದೆ. ಕುಟುಂಬ ಸಮೇತರಾಗಿ ಹೋಗಿ ಒಂದೊಳ್ಳೆ ಸಿನಿಮಾ ನೋಡಿದ ಸಂತೃಪ್ತಿ ಸಿಗುತ್ತದೆ.

ಸಿನಿ ಕಟ್ಟೆ ರೇಟಿಂಗ್ 3.5

Leave a Reply

Your email address will not be published. Required fields are marked *