ಸುಮಲತಾರನ್ನು ಸೋಲಿಸಿದ ನಿಖಿಲ್ ಕುಮಾರ್ ಸ್ವಾಮಿ…

ಹೌದು ನೀವು ಓದುತ್ತಿರುವುದು ನಿಜಕ್ಕೂ ನಿಜ. ನಿಖಿಲ್ ಅವರು ಸುಮಲತಾರನ್ನು ಸೋಲಿಸಿದ್ದಾರೆ. ರಂಗೇರಿದ್ದ ಮಂಡ್ಯ ಚುನಾವಣೆಯ ರಣರಂಗದಲ್ಲಿ ನಿಖಿಲ್ ಗೆಲ್ಲಲಿಲ್ಲ. ಆದರೂ ಸುಮಲತಾರನ್ನು ಸೋಲಿಸಿದ್ದಾರೆ.

nikhil kumarswamy
Nikhil Kumarswamy

ಸುಮಲತಾ ಅಂಬರೀಷ್ ಭಾರಿ ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಇವರು ಯಾರು ಏನೇನೋ ಹಾಕಿದ್ದಾರೆ ಅಂತ ಶಾಕ್ ಆಗ್ಬೇಡಿ ಸ್ನೇಹಿತರೇ. ನಿಖಿಲ್ ಅವರು ಸೋಲಿಸಿದ್ದು ಸುಮಲತಾ ಅಂಬರೀಷ್ ಅವರನಲ್ಲ. ಅವರು ಸೋಲಿಸಿರುವುದು ಸುಮಲತಾ ಅಂಬರೀಷ್ ಅವರನಲ್ಲ. ಅವರು ಸೋಲಿಸಿರುವುದು ಕ್ರಮ ಸಂಖ್ಯೆ 19,21 ಹಾಗೂ 22ರ ಸುಮಲತಾರನ್ನು. ಜನರನ್ನು ಕನ್ಫ್ಯೂಸ್ ಮಾಡಲು ಸುಮಲತಾ ಅಂಬರೀಷ್ ಅವರ ಜೊತೆಗೆ ಇನ್ನೂ ಮೂರು ಜನ ಸುಮಲತಾರನ್ನು ಕಣಕ್ಕಿಳಿಸಿದ್ದರು. ಕುಮಾರ್ ಸ್ವಾಮಿ ಅವರ ಲೆಕ್ಕಾಚಾರಗಳು ಇಂದು ತಲೆಕೆಳಗಾಗಿದೆ. ಲಕ್ಷ ಲಕ್ಷ ಮತಗಳ ಮುನ್ನಡೆ ಪಡೆದು ಸುಮಲತಾ ಅಂಬರೀಷ್ ಅವರು ಜಯಗೊಳಿಸಿದ್ದಾರೆ. ಉಳಿದ 3 ಸುಮಲತಾ ಅವರು ಒಟ್ಟು ಸೇರಿ 20 ಸಾವಿರಕ್ಕೂ ಹೆಚ್ಚು ಮತಗಳನ್ನು ತೆಗೆದುಕೊಂಡಿದ್ದಾರೆ.

Sumalatha named contestants

ಇದು ಸುಮಲತಾರ ಗೆಲುವಲ್ಲ… ಮಂಡ್ಯಾದ ಗೆಲುವು

ಸುಮಲತಾ ಅವರ ಕಾರ್ಯಕರ್ತರು ಹೇಳುತ್ತಿರುವ ಮಾತಿದು. ಅನುಕಂಪದ ಅಲೆಯೋ, ಸ್ವಾಭಿಮಾನದ ಛಲವೋ ಗೊತ್ತಿಲ್ಲ. ಸುಮಲತಾ ಅವರು ಗೆದ್ದಾಯಿತು. ಇನ್ನು ಅವರು ಮಂಡ್ಯ ಜನರ ಸೇವೆಗೆ ತೊಡಗಿಸಿಕೊಂಡು ಸಾಗಬೇಕು. ಪ್ರಚಾರದಲ್ಲಿ ನುಡಿದಂತೆ ಅವರ ಜೀವವನ್ನು ಮಂಡ್ಯ ಜನತೆಗಾಗಿ ಮುಡಿಪಿಡಬೇಕು. ಇದು ಅವರ ಮತ್ತು ಅಂಬರೀಷ್ ಅವರ ಅಭಿಮಾನಿಗಳ ಆಸೆಯೂ ಹೌದು. ಅಭಿಲಾಷೆಯೂ ಹೌದು..

sumalatha-darshan- yash

ಡಿ-ಬಾಸ್ + ವೈ-ಬಾಸ್ = ನಿಖಿಲ್ ಎಲ್ಲಿ ಬಾಸ್ ???

Sumalatha ambareesh

ಚಾಟಿಂಗ್ ಬೇಕಾದರೆ ನಿಲ್ಲಿಸಬಹುದು. ಗಾಸಿಪ್ಪಿಂಗ್ ಅನ್ನು ಬೇಕಾದರೂ ನಿಲ್ಲಿಸಬಹುದು. ಆದರೆ ಈ ಟ್ರೋಲಿಂಗ್ ಹಾಗೂ ಅದರ ಶೇರಿಂಗ್ ನಿಲ್ಲಿಸಲು ಸಾಧ್ಯವಿಲ್ಲ. ನೆಗೆಟೀವ್ ಟ್ರೋಲ್ ಮಾಡುವುದು ತಪ್ಪು. ಆದರೆ ಜೆ.ಡಿ.ಎಸ್ ವರಿಷ್ಠರು ಸುಮಲತಾ ಅವರ ತೇಜೋವಧೆ ಮಾಡಿದ್ದರು. ಇದಕ್ಕೂ ಮುಂಚೆ ಶುರು ಆದ ನಿಖಿಲ್ ಎಲ್ಲಿದ್ದೀಯಪ್ಪ ನೆಟಿಜನ್ಸ್ ಅಭಿಯಾನ ಇನ್ನೂ ಯಶಸ್ವಿಯಾಗಿ ಓಡುತ್ತಿದೆ. ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ಅಲ್ಲಿ ಸಿನೆಮಾ ಶುರು ಆದರೂ ಅದು ನಿಂತಿಲ್ಲ. ದರ್ಶನ್ ಮತ್ತು ಯಶ್ ಎಲ್ಲೂ ದುಡುಕದೆ, ಯಾವ ತೇಜೋವಧೆಗೂ ಪ್ರತಿಕ್ರಿಯಿಸದೆ ತಮ್ಮ ರಾಜಕೀಯ ತಂತ್ರವನ್ನು ಪ್ರದರ್ಶಿಸಿದರು. ಅದರ ರಿಸಲ್ಟ್ ಇವತ್ತು ನಮ್ಮ ಮುಂದೆ ಇದೆ. ಜೆ.ಡಿ.ಎಸ್ ಅವರಿಗೆ ಮಾತೇ ಮುಳುವಾಗಿದೆ. ಆದರೆ ಈ ರಾಜಕೀಯ ಬೆಳವಣಿಗೆ ಚಿತ್ರರಂಗದ ಮೇಲೆ ಪ್ರಭಾವ ಬೀರದಿದ್ದರೆ ಅಷ್ಟೇ ಸಾಕು.

ಜೊಡೆತ್ತುಗಳ ಸಾರಥ್ಯದಲ್ಲಿ ಇನ್ನೊಂದು ಕೆಲಸ ಬಾಕಿಯಿದೆ…

darshan and abhishek

ಅಂದುಕೊಂಡಂತೆ ಸುಮಲತಾ ಅವರನ್ನು ಸಂಸದೆಯನ್ನಾಗಿ ಮಾಡುವಲ್ಲಿ ದರ್ಶನ್ ಮತ್ತು ಯಶ್ ಯಶಸ್ವಿಯಾಗಿದ್ದಾರೆ. ಇಷ್ಟಕ್ಕೆ ಅವರ ಕೆಲಸ ಮುಗಿದಿಲ್ಲ. ಹೌದು ಇದೇ ತಿಂಗಳು ಮೇ 31ರಂದು ಅಭಿಷೇಕ್ ಅಂಬರೀಷ್ ಅಭಿನಯದ ‘ಅಮರ್’ ಸಿನೆಮಾ ತೆರೆಕಾಣಲಿದೆ. ಚಿತ್ರರಂಗದಲ್ಲಿ ಅಭಿಷೇಕ್ ಅವರನ್ನು ಗಟ್ಟಿಯಾಗಿ ನಿಲ್ಲಿಸುವ ಜವಾಬ್ದಾರಿ ಇನ್ನೂ ಬಾಕಿ ಇದೆ. ರಾಜಕೀಯದಲ್ಲಿ ಆಸಕ್ತಿ ಇಲ್ಲದಿದ್ದರೂ ಸುಮಲತಾ ಅಂಬರೀಷ್ ಅವರಿಗೋಸ್ಕರ, ಅಂಬಿ ಅಪ್ಪಾಜಿಗೋಸ್ಕರ ಕಣಕ್ಕಿಳಿದು ಕ್ಯಾನ್ವಾಸ್ ಮಾಡಿದ್ದರು ಯಶ್ ಮತ್ತು ದರ್ಶನ್. ಈಗ ಇದೇ ಜೋಡೆತ್ತುಗಳು ಅಭಿಷೇಕ್ ಅಂಬರೀಷ್ ಅವರನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಿಸಬೇಕಿದೆ. ಬಹುಶಃ ಇದು ದರ್ಶನ್ ಅವರಿಗಾಗಲಿ ಯಶ್ ಅವರಿಗಾಗಲಿ ಅಷ್ಟು ಕಷ್ಟದ ಕೆಲಸವಲ್ಲ. ಸಿನೆಮಾದಲ್ಲಿ ಅಭಿಷೇಕ್ ಅವರನ್ನು ಗಟ್ಟಿಯಾಗಿ ನೆಲೆಯೂರಿಸಿದರೆ ದರ್ಶನ್ ಮತ್ತು ಯಶ್ ಅವರ ಜವಾಬ್ದಾರಿ ಪೂರ್ಣಗೊಳ್ಳಲಿದೆ.

Leave a Reply

Your email address will not be published. Required fields are marked *