ಶಿವಣ್ಣ ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಲ್ಲ

ಶಿವಣ್ಣನ ಅಭಿಮಾನಿಗಳಿಗೆ ಬೇಸರ ತರುವಂತಹ ಸುದ್ದಿ ಹೊರಬಿದ್ದಿದೆ. ಶಿವಣ್ಣ ಅವರು ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಇದೇ ಜುಲೈ 12ಕ್ಕೆ 58ನೇ ವಸಂತಕ್ಕೆ ಶಿವಣ್ಣ ಕಾಲಿಡಲಿದ್ದಾರೆ. ಈ ಸಂಭ್ರಮವನ್ನು ಈ ಬಾರಿ ಅಭಿಮಾನಿಗಳೊಂದಿಗೆ ಆಚರಿಸಲು ಆಗುತ್ತಿಲ್ಲ. ಅದಕ್ಕೆ ಕಾರಣ ಅವರ ಬಲ ಭುಜದಲ್ಲಿ ಉಂಟಾಗಿರುವ ನೋವು. ಕೆಲವು ದಿನಗಳಿಂದ ಶಿವಣ್ಣ ಅವರಿಗೆ ಭುಜದ ನೋವು ತೀವ್ರವಾಗಿದೆ. ಅದಕ್ಕೆ ಚಿಕಿತ್ಸೆಯ ಅಗತ್ಯ ಇದ್ದು, ಶಿವಣ್ಣ ಲಂಡನ್ ಗೆ ತೆರಳಬೇಕಾಗಿದೆ. ಜುಲೈ 6ರಂದು ಶಿವಣ್ಣ ಲಂಡನ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತರ ಶಿವಣ್ಣ ವಾಪಸ್ ಮರಳಲಿದ್ದಾರೆ.

shivanna going for london july 6th

ಒಂದೆಡೆ ಅಭಿಮಾನಿಗಳಿಗೆ ಶಿವಣ್ಣನ ಹುಟ್ಟಿದ ಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಬೇಸರ. ಇನ್ನೊಂದೆಡೆ ಶಿವಣ್ಣನ ಚಿಕಿತ್ಸೆಯ ಬಗ್ಗೆ ಅಭಿಮಾನಿಗಳು ಕೊಂಚ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಚಿಕಿತ್ಸೆಯ ನಂತರ ಶಿವಣ್ಣ ಎರಡು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ. ಆದಷ್ಟು ಬೇಗ ಶಿವಣ್ಣ ಗುಣಮುಖರಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Leave a Reply

Your email address will not be published. Required fields are marked *