ಫೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಶಿವಣ್ಣ

ಕರುನಾಡ ಚಕ್ರವರ್ತಿ ಶಿವಣ್ಣ ಈ ಬಾರಿ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸುತ್ತಿಲ್ಲ. ತಮ್ಮ ಭುಜದ ಶಸ್ತ್ರ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿರುವ ಶಿವಣ್ಣ ಲಂಡನ್ ನಿಂದಲೇ ಫೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದ ಶಿವಣ್ಣ , ನಿಮ್ಮ ಅಭಿಮಾನ ಹಾಗೂ ಹಾರೈಕೆಯಿಂದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಮಂಚೆಗಿಂತಲೂ ಹೆಚ್ಚು ಆಕ್ಟೀವ್ ಆಗಲಿದ್ದೇನೆ. ಈ ಬಾರಿ ನಿಮ್ಮೊಂದಿಗೆ ಜನ್ಮ ದಿನವನ್ನು ಆಚರಿಸಲು ಆಗುತ್ತಿಲ್ಲ ಎಂಬ ಬೇಸರ ನನಗೂ ಕೂಡ ಇದೆ, ಬೆಂಗಳೂರಿಗೆ ಬಂದ ಮೇಲೆ ಒಂದು ಗೆಟ್ ಟುಗೆದರ್ ಮಾಡೋಣ. ನನ್ನ ಜನ್ಮ ದಿನಕ್ಕೆ ಶುಭಾಶಯ ಕೋರಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು ಎಂದು ತಿಳಿಸಿದರು.

ಬರ್ತ್ ಡೇ ದಿನ ಮಹಾನ್ ಕಲಾವಿದ ಸಾಂಗ್ ರಿಲೀಸ್

https://youtu.be/Q7_hFgeyAA4

ಇನ್ನು ಶಿವಣ್ಣ ಅಪ್ಪಟ ಅಭಿಮಾನಿ ಬಳಗವಾದ ‘ಶಿವ ಸೈನ್ಯ’ ತಂಡದಿಂದ ಶಿವಣ್ಣನ ಜನ್ಮ ದಿನದ ಪ್ರಯುಕ್ತ ಮಹಾನ್ ಕಲಾವಿದ ಸಾಂಗ್ ಪಿ.ಆರ್.ಕೆ. ಯೂಟ್ಯೂಬ್ ಚಾನಲ್ ನಲ್ಲಿ ಇಂದು ಬಿಡುಗಡೆ ಆಗಿದೆ. ಪ್ರಮೋದ್ ಅವರ ಸಾಹಿತ್ಯಕ್ಕೆ, ಚೇತನ್ ನಾಯಕ್ ಧ್ವನಿ ಯಾಗಿದ್ದು, ಚೇತನ್ ಕೃಷ್ಣ ಸಂಗೀತ ನೀಡಿದ್ದಾರೆ.

ಇನ್ನು ಶಿವಣ್ಣ ಅಭಿನಯದ ಮೂರು ಸಿನೆಮಾಗಳ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಬರ್ತ್ ಡೇ ಉಡುಗೊರೆ ನೀಡಿದಂತಾಗಿದೆ.

57 ನೇ ವಸಂತಕ್ಕೆ ಕಾಲಿಟ್ಟಿರುವ ಸರಳ ಜೀವಿ, ಕರುನಾಡ ಚಕ್ರವರ್ತಿ ಶಿವಣ್ಣ ಹೀಗೆ ಇನಷ್ಟು ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳನ್ನು ಸದಾ ಮನರಂಜಿಸಲಿ ಎಂಬುದೇ ಸಿನಿ ಕಟ್ಟೆ ತಂಡದ ಆಶಯ.

Leave a Reply

Your email address will not be published. Required fields are marked *