ದರ್ಶನ್ – ದಿನಕರ್ ಹೊಸ ಸಿನೆಮಾ

ದರ್ಶನ್ ಗಾಗಿ ಈ ಹಿಂದೆ ನವಗ್ರಹ ಹಾಗೂ ಸಾರಥಿ ಅಂತಾ ಹಿಟ್ ಚಿತ್ರಗಳನ್ನ ಅವರ ಸಹೋದರ ದಿನಕರ್ ತೂಗುದೀಪ್ ನಿರ್ದೇಶಿಸಿದ್ದರು. ಈ ಜೋಡಿಯ ಮುಂದಿನ ಸಿನೆಮಾ ಯಾವಾಗ ಸೆಟ್ಟೇರಲಿದೆ ಎಂದು ಅಭಿಮಾನಿಗಳು ಕಾತುರರಾಗಿದ್ದರು.ಆದರೆ ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

ದಾಸನ 50 ನೇ ಚಿತ್ರವನ್ನ ದಿನಕರ್ ನಿರ್ದೇಶಿಸಬೇಕಿತ್ತು. ಆದರೆ ತಮ್ಮ ಸ್ನೇಹಿತರಿಗಾಗಿ ತಮ್ಮ ಸಿನಿ ಕೆರಿಯರ್ ನ ಒಂದು ಮೈಲಿಗಲ್ಲನ್ನು ದರ್ಶನ್ ಮೀಸಲಿರಿಸಿದರು.

ಶಿವನಂದಿ ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್

ಈ ವರ್ಷದ ಸೂಪರ್ ಹಿಟ್ ಸಿನೆಮಾ ಯಜಮಾನ ಚಿತ್ರದಲ್ಲಿ ಬರುವ ಶಿವನಂದಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನೆಮಾದಲ್ಲಿ ಎಣ್ಣೆಯ ಬ್ರಾಂಡ್ ಹೆಸರು ಸಹ ಶಿವನಂದಿ. ಹೀಗಾಗಿ ಈ ಹೆಸರು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಈ ಟೈಟಲ್ ಮೇಲೆ ಆಸಕ್ತಿ ತೋರಿದ ದಿನಕರ್ ಫಿಲಂ ಛೇಂಬರ್ ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.

ದಿನಕರ್ ಈ ಹಿಂದೆ ದರ್ಶನ್ ಅವರಿಗಾಗಿ ಸರ್ವಾಂತರ್ಯಾಮಿ ಎಂಬ ಟೈಟಲ್ ನೊಂದಿಗೆ ಸಿನೆಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಶಿವನಂದಿ ಟೈಟಲ್ ರಿಜಿಸ್ಟರ್ ಮಾಡಿಸಿ ರುವುದರಿಂದ, ಸರ್ವಾಂತರ್ಯಾಮಿ ಕಥೆಯೇ ಶಿವ ನಂದಿ ಹೊಂದಲಿದೆಯೇ, ಅಥವಾ ಬೇರೆಯೇ ಕಥೆ ಇರಲಿದ್ಯಾ ಎಂಬುದು ಅಭಿಮಾನಿಗಳಲ್ಲಿ ಕಾಡುತ್ತಿದೆ.

Leave a Reply

Your email address will not be published. Required fields are marked *