“ಜಬರ್ದಸ್ತ್ ರುಸ್ತುಂ” ಸಂಪೂರ್ಣ ವಿಮರ್ಶೆ

ರುಸ್ತುಂ ಸಾಹಸ ನಿರ್ದೇಶಕ ರವಿ ವರ್ಮ ನಿರ್ದೇಶನದ ಮೊದಲ ಚಿತ್ರ. ಚಿತ್ರದಲ್ಲಿ ಅಭಿಷೇಕ್ ಭಾರ್ಗವ್ (ಶಿವಣ್ಣ) ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಶಿವಣ್ಣನ ನಟನೆ ನೋಡಿದರೆ ಅವರು ರಾಕ್ಷಸ ಸಿನೆಮಾದಲ್ಲಿ ಅಭಿನಯಿಸಿದ್ದ ಪಾತ್ರ ನೆನಪಿಗೆ ಬರುತ್ತದೆ. ಖೈದಿಗಳಿಗೆ ತಮ್ಮ ಗನ್ ಮೂಲಕವೇ ಪಾಠ ಹೇಳಿ ಕೊಡುವ ಶಿವಣ್ಣನ ಪಾತ್ರವೇ ಚಿತ್ರದ ಹೈಲೈಟ್.

Rusthum, shivanna, Ravi verma
Director Ravi Verma and shivanna

ಡಿ.ಸಿ. ಪಿ ಭರತ್ ರಾಜ್ ( ವಿವೇಕ್ ಒಬೆರಾಯ್) ಹಾಗೂ ಅಭಿಷೇಕ್ ಭಾರ್ಗವ್ ಇಬ್ಬರು ಬಾಲ್ಯ ಸ್ನೇಹಿತರು. ಇಬ್ಬರು ಕೂಡ ಪೊಲೀಸ್ ಅಧಿಕಾರಿಗಳೇ, ಆದ್ರೆ ಕರ್ತವ್ಯ ವಿಷಯದಲ್ಲಿ ಭಿನ್ನ. ಇದೇ ವಿಷಯದಲ್ಲಿ ಅಭಿ ಯನ್ನ ಭರತ್ ರಾಜ್ ಒಂದು ಸಂದರ್ಭದಲ್ಲಿ ಸಸ್ಪೆಂಡ್ ಮಾಡಿರುತ್ತಾರೆ. ಇದನ್ನ ನಿರ್ದೇಶಕರು ಎಲ್ಲು ಕೂಡ ಎಡವದಂತೆ ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಬಿಹಾರದಲ್ಲಿ ಖೈದಿಯೊಬ್ಬನ ವಿಚಾರಣೆ ಮಾಡುತ್ತಿರುವ ಸಂದರ್ಭ ಕರ್ನಾಟಕದ ಪ್ರಭಾವಿ ರಾಜಕಾರಣಿ ಒಬ್ಬ ಮಕ್ಕಳ ಕಳ್ಳ ಸಾಗಾಣಿಕೆ ದಂಧೆಯಲ್ಲಿ ತೊಡಗಿರುವುದು ಡಿ.ಸಿ. ಪಿ ಭರತ್ ರಾಜ್ ಗೆ ತಿಳಿಯುತ್ತದೆ. ಕರ್ನಾಟಕದ ಐ. ಎ. ಎಸ್ ಅಧಿಕಾರಿಯ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾನೆ.

ಈ ನಡುವೆ ಭರತ್ ರಾಜ್ ಹಾಗೂ ಐ. ಎ ಎಸ್ ಅಧಕಾರಿಯನ್ನು ಆ ರಾಜಕಾರಣಿ ಕಡೆ ಯವರು ಕೊಲೆ ಮಾಡುತ್ತಾರೆ. ಸಸ್ಪೆಂಡ್ ಆಗಿದ್ದ ಶಿವಣ್ಣ ಅಂಡರ್ ಕವರ್ ಆಫೀಸರ್ ಆಗಿ ಬೆಂಗಳೂರಿಗೆ ಬರುತ್ತಾರೆ. ಮುಂದೆ ಹೇಗೆ ಈ ದಂಧೆಯನ್ನು ಬಯಲು ಮಾಡುತ್ತಾರೆ ಎಂಬುದನ್ನ ಚಿತ್ರಮಂದಿರದಲ್ಲೇ ಹೋಗಿ ನೋಡಿ
ಸಾಮಾನ್ಯವಾಗಿ ದ್ವಿತೀಯಾರ್ಧದಲ್ಲಿ ಕಥೆಯನ್ನ ನಿರ್ದೇಶಕರು ಎಳೆಯುತ್ತಾರೆ. ಆದರೆ ಇಲ್ಲಿ ಕಥೆ ಇರುವುದೇ ಇಂಟರ್ವಲ್ ಆದಮೇಲೆ. ನಿರ್ದೇಶಕ ರವಿ ವರ್ಮ ಅವರ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು. ದ್ವಿತೀಯಾರ್ಧ ನೋಡಿದ ಮೇಲೆ ಇಂಟರ್ವಲ್ ನಲ್ಲಿ ಕೆಲ ಸೀನ್ ಗಳು ಬೇಡವಾಗಿತ್ತು ಅನಿಸುತ್ತದೆ.
ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ. ಹಾಡುಗಳು ಸಂದರ್ಭಕ್ಕೆ ತಕ್ಕ ಇದೆ (ಪೊಲೀಸ್ ಬೇಬಿ ಬಿಟ್ಟು) ಛಾಯಾಗ್ರಹಣ, ಸಂಭಾಷಣೆ ಎಲ್ಲವೂ ಬಹಳ ನೀಟ್ ಆಗಿದೆ. ಮಾಸ್ ಪ್ರೇಕ್ಷಕರಿಗೆ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನೆಮಾ. ವೀಕ್ ಎಂಡ್ ನ ಕಳಿಯಲು ಕುಟುಂಬ ಸಮೇತವಾಗಿ ನೋಡಬಹುದಾದ ಸಿನೆಮಾ.

Cinekatte rating – ⭐⭐⭐⭐ 4/5

Leave a Reply

Your email address will not be published. Required fields are marked *