‘ನನ್ನ ಪ್ರಕಾರ’ ಸಿನೆಮಾ ಮೂಲಕ ಪ್ರಿಯಾಮಣಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ

ನಿಮ್ಮ ಪ್ರಕಾರವಲ್ಲದ “ನನ್ನ ಪ್ರಕಾರ”

ಮಗಾ ನನ್ನ ಪ್ರಕಾರ ಸಿನೆಮಾ ಸಖತ್ತಾಗಿದೆ. ನಿನ್ ಪ್ರಕಾರ ಏನ್ ಅನ್ನುಸ್ತು ? ನನ್ನ ಪ್ರಕಾರ ನಾನು ನಾಳೆ ಫ್ರೀ ಇದ್ದೀನಿ. ನನ್ನ ಪ್ರಕಾರ ಅವನು ಬರಲ್ಲ. ನನ್ನ ಪ್ರಕಾರ ನಾವು ಒಳ್ಳೇದೆ ಮಾಡಿದ್ದೀವಿ. ಇಂತಹ ಅದೆಷ್ಟೋ ನನ್ನ ಪ್ರಕಾರಗಳು ನಮ್ಮ ದೈನಂದಿನ ಬದುಕಲ್ಲಿ ಬಂದು ಹೋಗುತ್ತದೆ. ಇಂತಹ ನನ್ನ ಪ್ರಕಾರಗಳಿಗೆ ಆಕಾರ ಕೊಟ್ಟು ಸಾಕಾರಗೊಳಿಸಲು ಹೊರಟ್ಟಿದ್ದಾರೆ ನಿರ್ದೇಶಕ ವಿನಯ್. . .

priyamani comeback to industry nanna prakara

ಮದುವೆಯ ನಂತರ ಮೊದಲ ಸಿನೆಮಾದಲ್ಲಿ ಪ್ರಿಯಾಮಣಿ

ನನ್ನ ಪ್ರಕಾರ ಮೂಲಕ ವಿನಯ್ ಬಾಲಾಜಿ ನಿರ್ದೇಶಕರಾಗುತ್ತಿದ್ದಾರೆ. ವಿಶೇಷವೆಂದರೆ, ಮದುವೆಯ ನಂತರ ಬಹುಭಾಷಾ ನಟಿ ಪ್ರಿಯಾಮಣಿ ನಟಿಸುತ್ತಿರುವ ಮೊದಲ ಚಿತ್ರ ಇದು. ಪ್ರಿಯಾಮಣಿ ಅಲ್ಲದೆ, ಕಿಶೋರ್, ಮಯೂರಿ, ನಿರಂಜನ್ ದೇಶಪಾಂಡೆ ಹಾಗೂ ಪ್ರಮೋದ್ ಶೆಟ್ಟಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್ ಅವರಿಗೆ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಒಂದಷ್ಟು ಕಿರುಚಿತ್ರ ನಿರ್ದೇಶಿಸಿದ್ದಾರೆ. “ಕ್ಯಾಮೆರಾ’ ಹಾಗು “ಮನಿ’ ಎಂಬ ಶಾರ್ಟ್ ಫಿಲಂ ನಿರ್ದೇಶಿಸಿರುವ ವಿನಯ್, ಒಂದು ನಿಮಿಷದೊಳಗಿರುವ “ಮನಿ’ ಕಿರುಚಿತ್ರಕ್ಕೆ ಮುಂಬೈ ಚಿತ್ರೋತ್ಸವದಲ್ಲಿ ಪ್ರಶಸ್ತಿ ಕೂಡ ಪಡೆದಿದ್ದಾರೆ. ನಿರ್ದೇಶಕನಲ್ಲದೇ ಸ್ಪಾಟ್ ಎಡಿಟರ್ ಆಗಿಯೂ ಈ ಹಿಂದೆ ಕೆಲಸ ಮಾಡಿರುವ ಅನುಭವವನ್ನು ವಿನಯ್ ಹೊಂದಿದ್ದಾರೆ.

ನಿರ್ದೇಶಕರ ಪ್ರಕಾರ “ನನ್ನ ಪ್ರಕಾರ”

Vinay balaji nanna prakara director
Vinay balaji, Director

“ನನ್ನ ಪ್ರಕಾರ ”ಮಲ್ಟಿ ಲೇಯರ್ ಥ್ರಿಲ್ಲರ್ ಸಿನೆಮಾ. ಚಿತ್ರದ ಕೊನೆ ಸೀನ್ ವರೆಗೂ ಸಸ್ಪೆನ್ಸ್ ಹೊಂದಿದೆ. ಅಮೃತ ಪಾತ್ರದಲ್ಲಿ ಪ್ರಿಯಾಮಣಿ ಹಾಗೂ ವಿಸ್ಮಯ ಪಾತ್ರದಲ್ಲಿ ಮಯೂರಿ ನಟಿಸಿದ್ದಾರೆ. ಕಿಶೋರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ . ಒಟ್ಟಿನಲ್ಲಿ ನಮ್ಮ ಟೀಮ್ ಸೂಪರ್  ಹೀಗಾಗಿ ನಾವು ಅಂದುಕೊಂಡಂತೆ “ನನ್ನ ಪ್ರಕಾರ” ಮೂಡಿ ಬಂದಿದೆ ಎಂದು ನಿರ್ದೇಶಕ ವಿನಯ್ ಬಾಲಾಜಿ ತಮ್ಮ ಟೀಮ್ ಬಗ್ಗೆ ಸಂತಸದ ನುಡಿಗಳನ್ನಾಡಿದ್ದಾರೆ.

ಸ್ಕ್ರೀನ್ ಪ್ಲೇ ಮೆಚ್ಚಿದ ಸೆನ್ಸಾರ್ . . .

ಈ ಸಿನೆಮಾಗೆ  ಸೆನ್ಸಾರ್ ಆಗಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರವನ್ನ ನೋಡಿರುವ ಸೆನ್ಸಾರ್ ಮಂಡಳಿ ಚಿತ್ರದ ಸ್ಕ್ರೀನ್ ಪ್ಲೇ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮನೋಹರ್ ಜೋಶಿ  ಕ್ಯಾಮೆರಾ ಕಣ್ಣಲ್ಲಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. “ಹುಲಿರಾಯ’ ಚಿತ್ರಕ್ಕೆ ಸಂಗೀತ ನೀಡಿದ್ದ ಅರ್ಜುನ್ ರಾಮು ಇಲ್ಲಿ ಮೂರು ಹಾಡುಗಳಿಗೆ ಸಂಗೀತ ನೀಡಿದ್ದರೇ, ಅನುರಾಧ ಭಟ್, ಕಾರ್ತಿಕ್, ಶ್ವೇತಾ ಮೋಹನ್ ಧ್ವನಿಯಾಗಿದ್ದಾರೆ. ಸತೀಶ್,  ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಮೂಡಿಬಂದಿದೆ.  ಗಾಂಧಿನಗರದಲ್ಲಿ ಯುವ ಪ್ರತಿಭೆಗಳಿಗೆನೂ ಕಮ್ಮಿಯಿಲ್ಲ. ಚಂದನವನದಲ್ಲಿ ಇತ್ತೀಚೆಗೆ ಹೊಸಬರ ಕಾರುಬಾರು ಸ್ವಲ್ಪ ಜೋರಾಗಿದೆ. ಉದಯೋನ್ಮುಕ ಪ್ರತಿಭೆ ವಿನಯ್ ಹೇಳಲು ಹೊರಟಿರುವ ನನ್ನ ಪ್ರಕಾರ, ಸಿನಿ ಪ್ರೇಕ್ಷಕರ ಪ್ರಕಾರ ಹೇಗಿರಲಿದೆ ಎಂಬುದು ಚಿತ್ರದ ಬಿಡುಗಡೆಯ ನಂತರ ತಿಳಿಯಲಿದೆ.

Leave a Reply

Your email address will not be published. Required fields are marked *