ಹುಟ್ಟು ಹಬ್ಬದ ದಿನವೂ ಶೂಟಿಂಗ್ ಅಲ್ಲಿ ತಲ್ಲೀನ ‘ಪ್ರಶಾಂತ್ ನೀಲ್’

ಯಾವ್ದೋ ಎರಡ್ ಸಿನೆಮಾ ಮಾಡಿ ಹಿಟ್ ಆದವರಲ್ಲಾ ಇವರು. ಇವರು ಮಾಡಿರುವ ಎರಡೂ ಸಿನೆಮಾನೂ ಹಿಟ್ಟೇ. ಹೌದು ಪ್ರಶಾಂತ್ ನೀಲ್ ಅವರು ಕನ್ನಡದ ಕೀರ್ತಿ. ಸಿನೆಮಾ ಕ್ಷೇತ್ರಕ್ಕೇ ಇವರು ಸ್ಪೂರ್ತಿ. ಉಗ್ರಂ ಕನ್ನಡದ ಹಿಟ್ ಮೂವಿ. ಕೆ.ಜಿ.ಎಫ್ ಚಾಪ್ಟರ್ 1 ಸೌತ್ ಇಂಡಸ್ಟ್ರಿಯಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನೆಮಾ. ಈ ಸಿನೆಮಾಗಳು ಕೇವಲ ಹೀರೋಗಳನ್ನ ಮಾತ್ರ ಬೆಳೆಸಲಿಲ್ಲ. ಬದಲಾಗಿ ಚಿತ್ರರಂಗವನ್ನೇ ಬೆಳೆಸಿತು. ಪ್ರಶಾಂತ್ ನೀಲ್ 1980 ಜೂನ್ 4 ರಂದು ಜನಿಸಿದರು. ಇಂದು ತಮ್ಮ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 39 ವರ್ಷ ಪೂರೈಸಿ 40ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಶಾಂತ್ ಅವರಿಗೆ ಸಿನಿಕಟ್ಟೆ ತಂಡದವರಿಂದ ಹುಟ್ಟು ಹಬ್ಬದ ಶುಭಾಶಯಗಳು.

prashanth neel director of kgf 2

ಹುಟ್ಟು ಹಬ್ಬದ ದಿನವೂ ಶೂಟಿಂಗ್

ಎಲ್ಲಾ ಮೀಡಿಯಾ, ಸೋಷಿಯಲ್ ಮೀಡಿಯಾಗಳಲ್ಲಿಯೂ ಪ್ರಶಾಂತ್ ಅವರ ಹುಟ್ಟು ಹಬ್ಬಕ್ಕೆ ಅಭಿನಂದನೆಗಳ ಮಹಾ ಪೂರವೇ ಹರಿದು ಬರುತ್ತಿದೆ. ಇದರ ಮಧ್ಯೆ ಪ್ರಶಾಂತ್ ಅವರು ಕೆ.ಜಿ.ಎಫ್-2 ಸಿನೆಮಾದ ಶೂಟಿಂಗ್ ಅಲ್ಲಿ ಬ್ಯೂಸಿ ಆಗಿದ್ದಾರೆ. ಇದು ಪ್ರಶಾಂತ್ ನೀಲ್ ಅವರಿಗೆ ಸಿನೆಮಾ ಮೇಲಿನ ಪ್ರೀತಿ ಮತ್ತು ನಿಷ್ಠೆ ತೋರಿಸುತ್ತದೆ.

ಕೆ.ಜಿಎಫ್ ಚಾಪ್ಟರ್ 2 ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿದೆ. ನಮ್ಮ ಕನ್ನಡ ಚಿತ್ರರಂಗವನ್ನು ಮತ್ತೊಂದು ಮೈಲಿಗಲ್ಲು ಮುಟ್ಟಿಸುವಲ್ಲಿ ಕೆ.ಜಿ.ಎಫ್ 2 ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸೋಣ. ಹಾಗೆಯೇ ಪ್ರಶಾಂತ್ ಅವರು ಮತ್ತಷ್ಟು ಸಿನೆಮಾಗಳನ್ನು ಮಾಡಲಿ ಎಂದು ಆಶಿಸೋಣ…

ವನ್ಸ್ ಅಗೇನ್ ಹುಟ್ಟು ಹಬ್ಬದ ಶುಭಾಶಯಗಳು ಟು ಸ್ಟಾರ್ ಡೈರೆಕ್ಟರ್

Leave a Reply

Your email address will not be published. Required fields are marked *