2500 ಥಿಯೇಟರ್ ಗಳಲ್ಲಿ ಧೂಳೆಬ್ಬಿಸಲು ಸಜ್ಜಾದ ಪೈಲ್ವಾನ್

Kiccha sudeepa, pailwaan
Pailwan

ಪೈಲ್ವಾನ್ ಸಿನೆಮಾ ಸೆಟ್ಟೇರಿದಾಗಿನಿಂದಲೂ ಚಿತ್ರ ಟಾಕ್ ಆಫ್ ದಿ ಟೌನ್ ಆಗಿದೆ. ಈಗಾಗಲೇ ಕಿಚ್ಚನ ಬಾಕ್ಸಿಂಗ್ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರ ತಂಡ ಸದ್ಯದಲ್ಲೇ ಆಡಿಯೋ ಕೂಡ ರಿಲೀಸ್ ಮಾಡಲಿದೆ.

ಇನ್ನು ಕೃಷ್ಣ – ಕಿಚ್ಚನ ಕಾಂಬಿನೇಷನ್ ನ ಎರಡನೇ ಚಿತ್ರ ಇದಾಗಿರುವುದಿಂದ ಸ್ವಾಭಾವಿಕವಾಗಿ ನಿರೀಕ್ಷೆ ಹೆಚ್ಚಾಗಿದೆ.ಆಡಿಯೋ ಹಕ್ಕು ಲಹರಿ ಸಂಸ್ಥೆ ಪಾಲಾಗಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆ.

ಆಗಸ್ಟ್ ನಲ್ಲಿ ರಿಲೀಸ್..?

ಎಲ್ಲ ಅಂದುಕೊಂಡಂತೆ ಆದರೆ ಚಿತ್ರ ಇದೇ ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗಲಿದೆ. ವಿಶ್ವದಾದ್ಯಂತ ಸುಮಾರು 2500 ಕ್ಕೂ ಹೆಚ್ಚಿನ ಥಿಯೇಟರ್ ಗಳಲ್ಲಿ ಪೈಲ್ವಾನ್ ನ ಕುಸ್ತಿ ಪ್ರದರ್ಶನವಾಗಲಿದೆ.

ಪೈಲ್ವಾನ್ ವಿತರಣ ಹಕ್ಕು ಖರೀದಿಸಿದ ಕೆ.ಜಿ.ಎಫ್ ವಿತರಕ

ಕನ್ನಡದ ಹೆಮ್ಮೆಯ ಚಿತ್ರ ಕೆ.ಜಿ.ಎಫ್ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಕಿಚ್ಚನ ಪೈಲ್ವಾನ್ ಕೂಡ ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ತೆಲುಗು ವರ್ಷನ್ ಅನ್ನು ಕೆ.ಜಿ.ಎಫ್ ವಿತರಿಸಿದ ವಾರಾಹಿ ಸಂಸ್ಥೆ ಖರೀದಿಸಿದೆ. ಒಟ್ಟು 8 ಭಾಷೆಗಳಲ್ಲಿ ಏಕಕಾಲಕ್ಕೆ ಪೈಲ್ವಾನ್ ತೆರೆ ಕಾಣುತ್ತಿದ್ದು, ಎಲ್ಲಾ ಭಾಷೆಗಳ ವಿತರಣ ಹಕ್ಕು ಅಂತಿಮ ಹಂತದಲ್ಲಿದೆ.

ಹೀಗೆ ಇನ್ನಷ್ಟು ಕನ್ನಡದ ಚಿತ್ರಗಳು ಪಾನ್ ಇಂಡಿಯಾ ದಲ್ಲಿ ತೆರೆಕಂಡು ದಾಖಲೆ ಕಲೆಕ್ಷನ್ ಮಾಡಲಿ ಎಂಬುದೇ ಎಲ್ಲಾ ಕನ್ನಡ ಸಿನಿ ರಸಿಕರ ಆಶಯ

Leave a Reply

Your email address will not be published. Required fields are marked *