ಪೈಲ್ವಾನ್ ಗಾನ “ಲಹರಿ”

ಕಿಚ್ಚ ಸುದೀಪ್ ಅಭಿನಯದ ಬಹನಿರೀಕ್ಷಿತ ಪೈಲ್ವಾನ್ ಚಿತ್ರ ಈಗಾಗಲೇ ಟಾಕ್ ಆಫ್ ಡಿ ಟೌನ್ ಆಗಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.

ಇನ್ನು ಇದಕ್ಕೂ ಮುಂಚೆ ಬಾದ್ ಷಾ ಸುದೀಪ್ ಅವರ ಬಾಕ್ಸಿಂಗ್ ಪೋಸ್ಟರ್ ರಿಲೀಸ್ ಆಗಿತ್ತು. ಸುದೀಪ್ ಕಟ್ಟುಮಸ್ತಾದ ಬಾಡಿ ನೋಡಿ ಅಭಿಮಾನಿಗಳು ಹಾಗೂ ಸಿನೆಮಾ ರಂಗದ ಅನೇಕ ದಿಗ್ಗಜ ಕಲಾವಿದರು ದಂಗಾಗಿದ್ದರು.

ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಚಿತ್ರದ ಮ್ಯೂಸಿಕ್ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ.ಚಿತ್ರದ ಹಾಡುಗಳು ಮುಂದಿನ ವಾರ ಒಂದೊಂದೇ ಬಿಡುಗಡೆಯಾಗಲಿದೆ.

2500 ಥಿಯೇಟರ್ ಗಳಲ್ಲಿ ಧೂಳೆಬ್ಬಿಸಲು ಸಜ್ಜಾದ ಪೈಲ್ವಾನ್

ಪೈಲ್ವಾನ್ ಹಾಡು ಲಹರಿ ವೇಲು ಪಾಲು, ಸದ್ಯದಲ್ಲೇ ಯೂಟ್ಯೂಬ್ ರೆಕಾರ್ಡ್ ಚೂರು ಚೂರು

ಪೈಲ್ವಾನ್ ಚಿತ್ರದ ಹಾಡುಗಳು ಲಹರಿ ಸಂಸ್ಥೆ ಪಾಲಾಗಿದೆ. ಈ ಮೂಲಕ ಮೊದಲ ಬಾರಿಗೆ ಲಹರಿ ವೇಲು ಹಾಗೂ ಕಿಚ್ಚ ಸುದೀಪ್ ಜೊತೆಯಾಗಿದ್ದಾರೆ. ಈ ಸಂತಸವನ್ನು ಸ್ವತಃ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಡಿದ್ದಾರೆ.

ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ನೀಡಲಿದ್ದಾರೆ.

Leave a Reply

Your email address will not be published. Required fields are marked *