ಭೂತಾನ್ ನೇಪಾಳದಲ್ಲೂ ಘರ್ಜಿಸಲು ಸಜ್ಜಾದ ಪೈಲ್ವಾನ್..!

ಸದ್ಯ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಬಗ್ಗೆ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಹೈಪ್ ಕ್ರಿಯೇಟ್ ಆಗಿದೆ. ಈಗಾಗಲೇ ಟೈಟಲ್ ಟ್ರಾಕ್ ಹಾಗೂ ಸಂಜೀತ್ ಹೆಗ್ಡೆ ಕಂಠಸಿರಿಯ ಕಣ್ಮಣಿಯೇ ಕೂಡ ಸೂಪರ್ ಹಿಟ್ ಆಗಿದ್ದು ಪೈಲ್ವಾನ್ ಚಿತ್ರ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ.

  • Kiccha sudeeep,pailwaan

ನಿಮಗೆಲ್ಲಾ ತಿಳಿದಿರುವ ಹಾಗೆ ಪೈಲ್ವಾನ್ ಕನ್ನಡ, ಹಿಂದಿ, ತಮಿಳು,ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಪೈಲ್ವಾನ್ ಅಖಾಡದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದ್ದು ಈ ಐದು ಭಾಷೆಗಳನ್ನು ಹೊರತು ಪಡಿಸಿ , ಇನ್ನು 3 ಭಾಷೆಗಳಲ್ಲಿ ಡಬ್ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.

ಮತ್ತೊಂದು ಪಾನ್ ಇಂಡಿಯಾ ಸಿನಿಮಾ ಪೈಲ್ವಾನ್

ಕೆಜಿಎಫ್ ಒಟ್ಟು ಐದು ಭಾಷೆಗಳಲ್ಲಿ ತೆರೆಕಂಡು ಕನ್ನಡ ಸಿನಿಮಾ ಖದರ್ ಅನ್ನು ಇಡೀ ವಿಶ್ವಕ್ಕೆ ಪಸರಿಸಿತು . ಇದೀಗ ಪೈಲ್ವಾನ್ ಕೂಡ ಇದೇ ಹೆಜ್ಜೆಯಲ್ಲಿ ಸಾಗುತ್ತಿದ್ದು, ದೇಶದಾದ್ಯಂತ ಏಕಕಾಲಕ್ಕೆ ತೆರೆಕಾಣಲಿದೆ. ಕನ್ನಡದಲ್ಲಿ ಕೆ.ಆರ್. ಜಿ ಸಂಸ್ಥೆ ವಿತರಿಸಲಿದ್ದು, ಉಳಿದ ಭಾಷೆಗಳ ಹಕ್ಕು ಜೀ ಸಂಸ್ಥೆ ಪಾಲಾಗಿದೆ.

ವಿದೇಶಗಳಲ್ಲಿ ಸಜ್ಜಾಗುತ್ತಿದೆ ಪೈಲ್ವಾನ್ ಅಖಾಡ

ನೆರೆಯ ಭೂತಾನ್ ಹಾಗೂ ನೇಪಾಳದಲ್ಲಿ ಕಿಚ್ಚನ ಕುಸ್ತಿಗೆ ಅಖಾಡ ಸಜ್ಜಾಗಿದೆ. ಅಷ್ಟೇ ಅಲ್ಲದೇ ಯು.ಕೆ, ಆಸ್ಟ್ರೇಲಿಯಾ, ಯು.ಎಸ್.ಎ , ಗಲ್ಫ್ ರಾಷ್ಟ್ರ ಗಳಲ್ಲಿಯೂ ಚಿತ್ರವನ್ನು ಪ್ರದರ್ಶಿಸಲು ಭರ್ಜರಿ ತಯಾರಿ ನಡೆಸಿದೆ.

Leave a Reply

Your email address will not be published. Required fields are marked *