ಎಲ್ಲೆಲ್ಲೂ “ಎಲ್ಲಿದ್ದಿಯಪ್ಪ”

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ “ನಿಖಿಲ್ ಎಲ್ಲಿದ್ದಿಯಪ್ಪ ” ಘೋಷವಾಕ್ಯ ಸಾಕಷ್ಟು ಟ್ರೋಲ್ ಆಗಿತ್ತು. ಕೇವಲ ಕರ್ನಾಟಕ ಮಾತ್ರವಲ್ಲದೆ ಸಾಗರದಾಚೆ ಕೂಡ ವೈರಲ್ ಆಗಿತ್ತು. ಕಣ್ಣಾಡಿಸಿದಲೆಲ್ಲಾ ಬರೀ ಇದೇ ಕಾಣುತ್ತಿತ್ತು ಅಷ್ಟರ ಮಟ್ಟಿಗೆ ಸೆನ್ಸೇಷನ್ ಆಗಿತ್ತು ಈ ಘೋಷವಾಕ್ಯ. ಇನ್ನು ಟಿಕ್ ಟಾಕ್, ಫೇಸ್ ಬುಕ್ , ಇನ್ಸ್ಟಾ ಗ್ರಾಮ್, ಟ್ವಿಟ್ಟರ್ ನಲ್ಲೂ ಇದೇ ಟ್ರೆಂಡಿಂಗ್ ಆಗಿತ್ತು. ಇದು ನಮಗೂ ನಿಮಗೂ ತಿಳಿದಿರುವ ವಿಚಾರ, ಆದರೆ ಚುನಾವಣೆ ಫಲಿತಾಂಶ ಬಂದು ಎಲ್ಲಾ ಚುನಾಯಿತ ಸಂಸದರು ಪ್ರಮಾಣ ವಚನ ಸ್ವೀಕರಿಸಿದ ನಂತರವೂ ಈ ಪದದ ಹವಾ ಕಿಂಚಿತ್ತೂ ಕಮ್ಮಿಯಾಗಿಲ್ಲ.

Nikhil elliddiyappa, Nikhil ,
Indian fan during Ind vs wi match

ಗುರುವಾರ ಮ್ಯಾಂಚೆಸ್ಟರ್ ನಲ್ಲಿ ನಡೆದ ಭಾರತ – ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಅಭಿಮಾನಿಯೊಬ್ಬ ಕ್ಯಾಮೆರಾಮನ್ ನನ್ನ ಸೆಳೆಯಲು ಕ್ಯಾಮೆರಾಮನ್ ಎಲ್ಲಿದ್ದಿಯಪ್ಪ ಎಂಬ ಪೋಸ್ಟರ್ ಹಿಡಿದಿದ್ದು, ಇದೀಗ ಎಲ್ಲೆಡೆ ಟ್ರೋಲ್ ಆಗುತ್ತಿದೆ. ಈ ಮೂಲಕ ಮಂಡ್ಯದಲ್ಲಿ ಶುರುವಾದ ಈ ಟ್ರೆಂಡ್ ಇದೀಗ ಆಂಗ್ಲರ ನಾಡಿನಲ್ಲೂ ಶುರುವಾಗಿದೆ.

Leave a Reply

Your email address will not be published. Required fields are marked *