ಸೌಂದರ್ಯ ದೇವತೆಗೆ ಜನ್ಮದಿನ – 15 ವರ್ಷ ಕಳೆದರೂ ಮಾಸದ ಪಂಚಭಾಷಾ ತಾರೆಯ ಅಭಿನಯ

ಸೌಂದರ್ಯ ಅವರ ಮೂಲ ಹೆಸರು ಸೌಮ್ಯ. ಸೌಮ್ಯ ಜುಲೈ 18 1976ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಸತ್ಯನಾರಾಯಣ ಹಾಗೂ ಮಂಗಳ ದಂಪತಿಯ ಮಗಳಾಗಿ ಜನಿಸಿದರು.

ನಟಿ ಸೌಂದರ್ಯ ಜನ್ಮ ದಿನ
ನಟಿ ಸೌಂದರ್ಯ

ಸೌಮ್ಯ ಸ್ವಭಾವದ ಸೌಂದರ್ಯ

ಸೌಂದರ್ಯ ತಮ್ಮ 16 ವರ್ಷದ ಸಿನಿ ಕೆರಿಯರ್ ನಲ್ಲಿ ದೇಶದ ಟಾಪ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಚೆಲುವು ಮತ್ತು ಅಭಿನಯ ಶಕ್ತಿ ಮೇಳೈಸಿದ ನಟಿ ಸೌಂದರ್ಯ ಎಷ್ಟೇ ಎತ್ತರಕ್ಕೆ ಹೋದರು ಕೂಡ ತನ್ನ ಅಭಿಮಾನಿಗಳೊಂದಿಗೆ ಎಂದಿಗೂ ದರ್ಪದಿಂದ ನಡೆದುಕೊಂಡಿರಲಿಲ್ಲ.

ಎಂದೆಂದಿಗೂ ಮರೆಯಲಾಗದ ನಾಗವಲ್ಲಿ ಪಾತ್ರ

ಆಪ್ತಮಿತ್ರ ಚಿತ್ರದಲ್ಲಿ ಸೌಂದರ್ಯ ಅವರು ಅಭಿನಯಿಸಿದ್ದ ನಾಗವಲ್ಲಿ ಪಾತ್ರ ಎಂದೆಂದಿಗೂ ಮರೆಯಲಾಗದಂತಹ ಪಾತ್ರ. ರಾರಾ ಸರಸಕು ರಾರಾ ಹಾಡು ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚಳಿಯಾಗಿ ಉಳಿದಿದೆ. ಇಂದೂ ಕೂಡ ಅನೇಕ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್ ಗಳಲ್ಲಿ ಮಕ್ಕಳು ನಾಗವಲ್ಲಿ ವೇಷಧರಿಸಿ ಕಂಗೊಳಿಸುತ್ತಾರೆ.

ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಖ್ಯಾತ ನಟಿ ಸೌಂದರ್ಯ ,2004 ಏಪ್ರಿಲ್ 17ರಂದು ಅಗ್ನಿ ಏವಿಯೇಷನ್ ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಡೆದ ಅವಘಡದಲ್ಲಿ ದುರ್ಮರಣಕ್ಕೀಡಾಗಿ ಬಾರದ ಲೋಕಕ್ಕೆ ತೆರಳಿದರು.

Leave a Reply

Your email address will not be published. Required fields are marked *