ಪುಟಾಣಿ ಪಂಟರ್ ಲಿಖಿತ್

ಲಿಖಿತ್‌ ಡಿ ಜೈನ್‌

ಚೋಟುದ್ದ ಇಲ್ಲಾ ಏನ್‌ ಡ್ಯಾನ್ಸ್‌ ಮಾಡ್ತಾನೆ ಗುರು..! ಅಬ್ಬಬ್ಬಾ ದೊಡ್ಡವರಿಗೂ ಕಷ್ಟ ಆಗುವ ಸ್ಟೆಪ್ಸ್‌ ಗಳನ್ನ‌ ಎಷ್ಟು ಸಲೀಸಾಗಿ ಮಾಡ್ತಾನೆ. ಮುಂದೆ ಈತ ಪ್ರಭುದೇವ ಆಗೋದು ಗ್ಯಾರಂಟಿ. ಇದು ನಾವು ಹೇಳುತ್ತಿರುವುದಲ್ಲ‌ ಈತನ ಡ್ಯಾನ್ಸ್‌ ಅನ್ನ ಯೂಟ್ಯೂಬ್‌  ಹಾಗೂ ಟಿವಿ ಯಲ್ಲಿ ನೋಡಿದ ಜನರು ಹೇಳಿದ ಮಾತುಗಳು..!

ಈ ಡ್ಯಾನ್ಸ್‌ ಪಂಟರ್‌ ನ ಹೆಸರು ಲಿಖಿತ್‌ ಡಿ ಜೈನ್‌ . ‘&’ ಟಿವಿಯಲ್ಲಿ ಪ್ರಸಾರವಾಗುವ “ಹೈ ಫೀವರ್‌ ಡ್ಯಾನ್ಸ್‌ ಕಾ ನಯಾ ತೇವರ್ ” ಡ್ಯಾನ್ಸ್‌ ರಿಯಾಲಿಟಿ ಶೋ ನ ರನ್ನರ್‌ ಅಪ್.‌ ನಮ್ಮ‌  ಬೆಂಗಳೂರಿನ ಈ ಅಪ್ರತಿಮ ಪ್ರತಿಭೆ ಕೇವಲ ಜಡ್ಜಸ್‌ ಮಾತ್ರವಲ್ಲದೇ ಇಡೀ ಭಾರತವನ್ನ ತನ್ನ ಡ್ಯಾನ್ಸ್‌ ನಿಂದ ಮೋಡಿಗೊಳಿಸಿದ್ದ. ‌

ಸ್ಟೇಜ್ ಮೇಲೆ ಡ್ಯಾನ್ಸ್‌ ಮಾಡಲು ಆರಂಭಿಸಿದರೆ ಎಲ್ಲರೂ ಒಮ್ಮೆ ಇವನತ್ತ ತಿರುಗಿ ನೋಡುವಂತೆ ಮಾಡುವ ಸಾಮರ್ಥ್ಯ ಈ ಚಿಕ್ಕ ಹುಡುಗನಿಗಿತ್ತು ಅಂದರೆ ಅದು ಅತಿಶಯೋಕ್ತಿಯೇನಲ್ಲಾ.

ಫಿನಾಲೆಯಲ್ಲಿ ಲಿಖಿತ್‌ ಜೋಡಿ ಗೆದ್ದೇ ಗೆಲ್ಲುತ್ತದೆ ಎಂದು ನೆರೆದಿದ್ದ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಲಿಖಿತ್‌ ಜೋಡಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು. ಒಂದು ರಾಷ್ಟ್ರೀಯ ವಾಹಿನಿಯ ಡ್ಯಾನ್ಸ್‌ ರಿಯಾಲಿಟಿ ಶೋ ನಲ್ಲಿ ನಮ್ಮ ಕರ್ನಾಟಕದ ಪ್ರತಿಭೆ ಕಪ್‌ ಹಿಡಿಯುತ್ತಾನೆ ಎಂದು ಕಾಯುತ್ತಿದ್ದವರಿಗೆ  ಅಂದು ಅತೀ ದೊಡ್ಡ ಆಘಾತವಾಗಿತ್ತು. ಕೊನೆ ಕ್ಷಣದಲ್ಲಿ ಟ್ರೋಫಿ ಮಿಸ್‌ ಆಗಿದ್ದರಿಂದ ಲಿಖಿತ್‌ ಕಣ್ಣಲ್ಲಿ ಹರಿದ ಕಣ್ಣೀರು ನೋಡಿದ ಹಲವಾರು ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸಿದವು.

ಟಿವಿ ನೋಡುತ್ತಲೇ ಡ್ಯಾನ್ಸರ್‌ ಆದ ಕಥೆ..!

ಲಿಖಿತ್‌ ಹೀಗೆ ಒಮ್ಮೆ ಡ್ಯಾನ್ಸ್‌ ರಿಯಾಲಿಟಿ ಶೋ ಒಂದನ್ನು ಟಿ.ವಿ ಯಲ್ಲಿ ನೋಡುತ್ತಿದ್ದ ಸಂದರ್ಭದಲ್ಲಿ ಆತನಿಗೆ ಡ್ಯಾನ್ಸರ್‌ ಮಾಡಿದ ಡ್ಯಾನ್ಸ್‌ ಗಳು ಗಮನ ಸೆಳೆಯಿತು. ಹೀಗೆ ತಾನು ಕೂಡ ಯಾಕೆ ಡ್ಯಾನ್ಸ್‌ ಮಾಡಬಾರದು ಎಂದು ತನ್ನ ಪುಟಾಣಿ ವಯಸ್ಸಿನಲ್ಲಿ ಲಿಖಿತ್‌ ನಿಶ್ಚಿಯಿಸಿದ . ಬಳಿಕ ತನ್ನಳೊಗಿನ ಪ್ರತಿಭೆಯನ್ನು ಹೊರತಂದದ್ದು, ರಿಯಾಲಿಟಿ ಶೋ ಒಂದರಲ್ಲಿ ರನ್ನರ್‌ ಆಪ್‌ ಆಗಿದ್ದು ಈಗ ಇತಿಹಾಸ.

ಡ್ಯಾನ್ಸ್‌ ಕ್ಲಾಸ್‌ ಶುರುಮಾಡುವ ಹೆಬ್ಬಯಕೆ

ಹೌದು ತನ್ನ ಹತ್ತನೇ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಲಿಖಿತ್‌ ಡಿ ಜೈನ್‌ ಡ್ಯಾನ್ಸ್‌ ಕ್ಲಾಸ್‌ ಒಂದನ್ನು ಶುರು ಮಾಡುವ ತವಕದಲ್ಲಿದ್ದಾನೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಈತ ಡ್ಯಾನ್ಸ್‌ ಹೇಳಿಕೊಡಲಿದ್ದಾನೆ.

ಲಿಖಿತ್‌ ಡ್ಯಾನ್ಸ್‌ ನಂತೆ ವಿದ್ಯಾಭ್ಯಾಸದಲ್ಲೂ ಹಿಂದೆಬಿದ್ದಿಲ್ಲ. ಆರನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ಹುಡುಗ ಡ್ಯಾನ್ಸ್‌ ಗೂ ಸೈ ಓದಿಗೂ ಸೈ ಎಂಬಂತಹ ಪ್ರತಿಭಾವಂತನಾಗಿದ್ದಾನೆ.

ನಮ್ಮ ಕರ್ನಾಟಕ ಪ್ರತಿಭೆ ಕೇವಲ ತನ್ನ ಹತ್ತನೇ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಈತನ ಸಾಧನೆ ಇನ್ನಷ್ಟು ಪುಟಾಣಿಗಳಿಗೆ, ಯುವಕರಿಗೆ ಸ್ಪೂರ್ತಿಯಾಗಲಿ ಎಂಬುದೇ ಸಿನಿ ಕಟ್ಟೆ ತಂಡದ ಆಶಯ

Leave a Reply

Your email address will not be published. Required fields are marked *