ಗಾಂಧಿನಗರಕ್ಕೆ ಹೊಸ ‘ಕಿರಣ’

ಐ ಲವ್ ಯೂ ಮೂಲಕ ವೈದ್ಯರ ಪಯಣ

ಇತ್ತೀಚೆಗೆ ಸಿನೆಮಾ ರಂಗಕ್ಕೆ ವಿದ್ಯಾವಂತರು ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಂಜಿನಿಯರ್ಸ್ ಗಳ ಸಂಖ್ಯೆ ಹೆಚ್ಚಾಗಿದೆ. ಸಿನೆಮಾ ಕ್ಷೇತ್ರದಂತೆಯೇ ರಾಜಕೀಯ ಕ್ಷೇತ್ರದಲ್ಲಿಯೂ ವಿದ್ಯಾವಂತರು ಬಂದರೆ ದೇಶಕ್ಕೆ ಒಳಿತಾಗುವುದು. ಸಿನೆಮಾವನ್ನು ವೃತ್ತಿಯಾಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗೆಯೇ ಅದರಲ್ಲಿ ಯಶಸ್ವಿಯಾಗುವುದು ಕೂಡ ಅಷ್ಟೇ ಕಷ್ಟ. ಇಂದು ಐ ಲವ್ ಯೂ ಸಿನೆಮಾ ಮೂಲಕ ಚಿತ್ರರಂಗಕ್ಕೆ ಪರಿಚಯರಾಗಿರುವ ಕಿರಣ್ ಅವರು ವೃತ್ತಿಯಲ್ಲಿ ಡಾಕ್ಟರ್. ಜನರ ನಾಡಿ ಬಡಿತ, ಎದೆ ಬಡಿತವನ್ನು ಲೆಕ್ಕಹಾಕುವ ಡಾ|| ಕಿರಣ್ ಈಗ ಸಂಗೀತದ ಮೂಲಕ ಪ್ರೇಕ್ಷಕರ ಮನಸ್ಸಿನ ತಂತಿ ಮೀಟುತ್ತಿದ್ದಾರೆ.

i love you cinema music director

ಕಿರಣ್ ತೋಟಂಬೈಲು ಅವರು ಇಂದಿನ ಗಾಂಧಿನಗರದ ಟಾಕ್ ಆಗಿದ್ದಾರೆ. ಐ ಲವ್ ಯೂ ಚಿತ್ರದ ಮೂಲಕ ಬುದ್ಧಿವಂತನ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಐ ಲವ್ ಯೂ ಸಿನೆಮಾ ಜನರಿಗೆ ಇಷ್ಟವಾಗಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನೆಮಾದ ಮ್ಯೂಸಿಕ್ ಅದ್ಭುತವಾಗಿ ಮೂಡಿಬಂದಿದೆ. ಯೂಟ್ಯೂಬ್ ಅಲ್ಲಿ ಐ ಲವ್ ಯೂ ಚಿತ್ರದ ಹಾಡುಗಳಿಗೆ ಮಿಲಿಯನ್ ಗಟ್ಟಲೆ ವೀವ್ಸ್ ಬಂದಿರುವುದೇ ಅದಕ್ಕೆ ಸಾಕ್ಷಿ. ಈ ಮೂಲಕ ಗಾಂಧಿನಗರಕ್ಕೆ ಹೊಸ ಸಂಗೀತ ನಿರ್ದೇಶಕ ಸಿಕ್ಕಿದ್ದಾರೆ.

ಕೊಡಗಿನ ಮೂಲದ ಡಾ||ಕಿರಣ್ ಅವರಿಗೆ ಚಿತ್ರರಂಗ ಹೊಸತೇನಲ್ಲ. ಮುಂಗಾರು ಮಳೆ ನಿರ್ಮಾಪಕ ಈ. ಕೃಷ್ಣಪ್ಪ ಅವರು ಕಿರಣ್ ಅವರ ಭಾವ. ಹಾಗಾಗಿ ಸಿನೆಮಾ ರಂಗದವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಕಿರಣ್ ಮುಂಚಿನಿಂದಲೂ ಸಂಗೀತ ಪ್ರಿಯರು. ಸುಮಾರು ಸಿನೆಮಾಗಳ ವಿತರಣೆಯನ್ನು ಕೂಡ ಮಾಡಿದ್ದಾರೆ.  

ಸ್ವಂತ ಸ್ಟುಡಿಯೋ ಒಂದನ್ನು ಮಾಡಿಕೊಂಡಿದ್ದ ಕಿರಣ್ ಅವರು ತಮ್ಮ ಬಿಡುವಿನ ಸಮಯದಲ್ಲಿ ಟ್ಯೂನ್ಗಳನ್ನು ಕಂಪೋಸ್ ಮಾಡುತ್ತಿದ್ದರು. ದಿನಕ್ಕೆ ಮೂರರಿಂದ ನಾಲ್ಕು ತಾಸು ಮಲಗುವ ಕಿರಣ್ ಅವರು ಸದಾ ವರ್ಕೋಹಾಲಿಕ್. ಕಿರಣ್ ಅವರು ಬಿ.ಜಿ.ಎಸ್. ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರೂ ಕೂಡ ಮ್ಯೂಸಿಕ್ ಮೇಲೆ ಹೆಚ್ಚು ಲವ್ ಇಟ್ಟುಕೊಂಡಿದ್ದರು. ತಮ್ಮ ಫ್ರೀ ಟೈಮ್ ಅನ್ನು ಫುಲ್ ಟೈಮ್ ಉಪಯೋಗಿಸಿಕೊಂಡು ಶ್ರಮಿಸಿದ ಕಿರಣ್ ಅವರು ಸಂಗೀತ ಕ್ಷೇತ್ರದಲ್ಲಿ ಗುರುತಿಸುವಂತಹ ಕೆಲಸ ಮಾಡಿದ್ದಾರೆ.

ಕಾರ್ ಅಲ್ಲಿಯೇ ಮ್ಯೂಸಿಕ್ ಡೈರೆಕ್ಟರ್ ಆದರು. . .

music director kiran i love you kannada cinema

ಕಿರಣ್ ಅವರಿಗೆ ಆರ್ ಚಂದ್ರು ಅವರ ಪರಿಚಯ ತಾಜ್ ಮಹಲ್ ಅಷ್ಟೇ ಹೊಸತು. ಐ ಲವ್ ಯೂ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಹುಡುಕುವ ಕೆಲಸ ನಡೆದಿತ್ತು. ಕಿರಣ್ ಮತ್ತು ಆರ್ ಚಂದ್ರು ಅವರು ಒಮ್ಮೆ ಕಾರ್ ಅಲ್ಲಿ ಹೋಗುವಾಗ ತಮ್ಮ ಹೊಸ ಸಿನೆಮಾಗೆ ಮ್ಯೂಸಿಕ್ ಡೈರೆಕ್ಟರ್ ಅನ್ನು ಹುಡುಕುತ್ತಿರುವ ವಿಷಯ ಹೇಳಿದ್ದಾರೆ. ಕಿರಣ್ ಅವರು ತಾವು ಸಂಯೋಜಿಸಿದ್ದ ಟ್ಯೂನ್ಗಳನ್ನು ಚಂದ್ರು ಅವರಿಗೆ ಕೇಳಿಸಿದ್ದಾರೆ. ಅದು ಅವರಿಗೆ ಹಿಡಿಸಿದೆ ಕೂಡ. ಆ ಕ್ಷಣದಲ್ಲೇ ಚಂದ್ರು ಅವರು “ನೀವೆ ನಮ್ಮ ಸಿನೆಮಾದ ಮ್ಯೂಸಿಕ್ ಡೈರೆಕ್ಟರ್” ಎಂದರಂತೆ

“ಶ್ರದ್ಧೆ ಜೀವನದ ಗದ್ದೆ, ಅದ ಕಲಿತರೆ ನೀ ಗೆದ್ದೇ”

ವಿನಾ ಕಾರಣ ಸಮಯವನ್ನು ವ್ಯರ್ಥಿಸದೆ ಶ್ರದ್ಧೆ ಮತ್ತು ಆಸಕ್ತಿ ಇಂದ ಕೆಲಸ ಮಾಡಿದರೆ ಜೀವನದಲ್ಲಿ ಏನೂ ಬೇಕಾದರೂ ಸಾಧಿಸಬಹುದು ಎನ್ನುತ್ತಾರೆ ಕಿರಣ್. ಮ್ಯೂಸಿಕ್ ಮತ್ತು ಕಾಲೇಜಿನಲ್ಲಿ ಪಾಠ ಮಾಡುವುದು ಎರಡನ್ನೂ ಇಷ್ಟ ಪಡುವ ಕಿರಣ್ ಸದಾ ಲವಲವಿಕೆ ಇಂದ ಇರುತ್ತಾರೆ.

music director kiran thotambailu

ಮುಂದಿನ ಚಿತ್ರಗಳ ಬಗ್ಗೆ . . .

ಇಷ್ಟು ಅಷ್ಟು ಅನ್ನುವುದಕ್ಕಿಂತ ಕ್ವಾಲಿಟಿ ಸಿನೆಮಾಗಳನ್ನು ಮಾಡುವ ಆಸೆ ಹೊಂದಿದ್ದಾರೆ ಕಿರಣ್. ಈಗಾಗಲೇ ಇವರಿಗೆ 8 ಆಫರ್ ಗಳು ಬಂದಿವೆ.  2 ತಮಿಳು ಚಿತ್ರಕ್ಕೂ ಕೂಡ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಪ್ರೇಮ್ಸ್ ಅವರ ಮುಂಬರುವ ಪ್ರೊಜೆಕ್ಟ್ ನಲ್ಲೂ ಸಂಗೀತ ಸಂಯೋಜಿಸಲಿದ್ದಾರೆ ಕಿರಣ್.

ಉಪೇಂದ್ರ ಅಂದರೆ ?

ನಿಜವಾದ ಸೂಪರ್‍ ಕಮ್ ಸಿಂಪಲ್ ಸ್ಟಾರ್ ಅಂದರೆ ಉಪೇಂದ್ರ. ಇಂದಿಗೂ ಜನರು ಅವರನ್ನು ಪ್ರೀತಿಸುತ್ತಾರೆ ಎಂದರೆ ಅದಕ್ಕೆ ಅವರ ಕೆಲಸದ ಜೊತೆ ಜೊತೆಗೆ ಅವರ ವಿನಯವಂತಿಕೆಯೂ ಕಾರಣ ಎನ್ನುತ್ತಾರೆ ಕಿರಣ್. ಉಪೇಂದ್ರ ಅವರ ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಆಗಿರುವ ನನ್ನ ಅದೃಷ್ಟ ಎಂದರು ಕಿರಣ್.        

Leave a Reply

Your email address will not be published. Required fields are marked *