ವಿದೇಶಕ್ಕೆ ಹಾರಿದ ಐ ಲವ್ ಯು

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಆರ್ . ಚಂದ್ರು ನಿರ್ದೇಶನದ ಐ. ಲವ್ ಯು ಚಿತ್ರ ಇದೀಗ ಭರ್ಜರಿ 50 ನೇ ದಿನದತ್ತ ಮುನ್ನುಗ್ಗುತ್ತಿದೆ. ಈಗಾಗಲೇ ಈ ಸಿನೆಮಾ ಮೆಗಾ ಹಿಟ್ ಆಗಿದ್ದು, ಬಿಡುಗಡೆಗೊಂಡ ಎಲ್ಲ ಕೇಂದ್ರಗಳಲ್ಲೂ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಗಳಿಸುತ್ತಿದೆ.

ಐ ಲವ್ ಯು
ಐ ಲವ್ ಯು

ಜೂನ್ 14 ರಂದು ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ತೆರೆಕಂಡು ಕರ್ನಾಟಕ , ಆಂಧ್ರ ಹಾಗೂ ತೆಲಂಗಾಣದಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಅಷ್ಟೇ ಅಲ್ಲದೆ ಕರ್ನಾಟಕ ಸುಮಾರು 325 ಸ್ಕ್ರೀನ್ ಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿ 50 ನೇ ದಿನದತ್ತ ದಾಪುಗಾಲು ಇಟ್ಟಿದೆ.

ಯು.ಎಸ್ ನಲ್ಲೂ ಉಪ್ಪಿ ಪ್ರೇಮ ಪಾಠ ಪ್ರದರ್ಶನ

ಕರ್ನಾಟಕ , ಆಂಧ್ರ ಹಾಗೂ ತೆಲಂಗಾಣದಲ್ಲಿ ಭರ್ಜರಿ ಜಯ ಗಳಿಸಿರುವ ಐ ಲವ್ ಯು ಇದೀಗ ಯು.ಎಸ್ ನಲ್ಲು ಬಿಡುಗಡೆಯಾಗಿದೆ. ಅಮೆರಿಕಾದಲ್ಲಿ ರಿಲೀಸ್ ಮಾಡುವ ಜವಾಬ್ದಾರಿಯನ್ನು ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಅವರಿಗೆ ವಹಿಸಲಾಗಿದೆಯಂತೆ. ಯು.ಕೆ ನಲ್ಲೂ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.

Leave a Reply

Your email address will not be published. Required fields are marked *