ಗಮನ ಸೆಳೆಯುತ್ತಿದೆ ಹೂನಗೆ ಆಮಂತ್ರಿಸಿದೆ

ತನ್ನ ಮೇಕಿಂಗ್ ಹಾಗೂ ಪೋಸ್ಟರ್ ಗಳಿಂದ ಚಂದನವನದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ‘ನನ್ನ ಪ್ರಕಾರ’ ಸಿನೆಮಾದ ಸುಮಧುರ ಹಾಡೊಂದು ಬಿಡುಗಡೆಯಾಗಿದ್ದು, ಕೇಳುಗರಿಂದ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೂನಗೆ ಆಮಂತ್ರಿಸಿದೆ ಎನ್ನುವ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ಹಾಡಿನಲ್ಲಿ ಪ್ರಿಯಾಮಣಿ ಹಾಗೂ ಕಿಶೋರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ನಾಯಿ ಕೂಡ ಕಾಣಿಸಿಕೊಂಡಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

priyamani comeback after marriage to films
ಪ್ರಿಯಾಮಣಿ ಹಾಗೂ ಕಿಶೋರ್

ಕಿರಣ್ ಕಾವೇರಪ್ಪ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಕಾರ್ತಿಕ್ ಹಾಗೂ ಅನುರಾಧ ಭಟ್ ಈ ಇಂಪಾದ ಹಾಡಿಗೆ ಧ್ವನಿಯಾಗಿದ್ದಾರೆ.

https://cinekatte.in/priyamani-comeback-nanna-prakara/

ನನ್ನ ಪ್ರಕಾರ ಸಿನಿಮಾವನ್ನು ಉದಯೋನ್ಮುಖ ಪ್ರತಿಭೆ ವಿನಯ್ ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಜಿ. ವಿ.ಕೆ ಕಂಬೈನ್ಸ್ ಅಡಿಯಲ್ಲಿ ಸಿನೆಮಾ ನಿರ್ಮಾಣ ಆಗಿದ್ದು , ಇದೇ *ಅಗಸ್ಟ್ 23 ರಂದು* ದೀಪಕ್ ಗಂಗಾಧರ್ ಫಿಲಂಸ್ ನವರ ವಿತರಣೆಯಲ್ಲಿ ರಾಜ್ಯದಾದ್ಯಂತ  ಬಿಡುಗಡೆಗೊಳ್ಳಲಿದೆ.

https://youtu.be/_otbNcWjUMg

Leave a Reply

Your email address will not be published. Required fields are marked *