ಮತ್ತೊಂದು ಟ್ರೆಂಡ್ ಸೃಷ್ಟಿಸಿದ ಶಿವಣ್ಣ

ಶಿವಣ್ಣ ಲಾಂಗ್ ಹಿಡಿಯುವ ಸ್ಟೈಲು ಆ ಗತ್ತು , ಅಭಿಮಾನಿಗಳಿಗೆ ಇಂದಿಗೂ, ಎಂದೆಂದಿಗೂ ಹಾಟ್ ಫೇವರಿಟ್. ಲಾಂಗ್, ಗನ್ ಗಳಿಂದ ಅಬ್ಬರಿಸುತ್ತಿದ್ದ ಶಿವಣ್ಣ ಇದೀಗ ಲೇಖನಿ ಹಿಡಿದಿರುವುದು ವಿಶೇಷ.

ನಾವು ಹೇಳುತ್ತಿರುವುದು ಶಿವಣ್ಣ ಅಭಿನಯದ ದ್ರೋಣ ಸಿನಿಮಾದ ಬಗ್ಗೆ. ಕತ್ತಿಗಿಂತ ಹರಿತವಾದದ್ದು ಲೇಖನಿ ಅನ್ನೋ ಸ್ಪೆಷಲ್ ಟ್ಯಾಗ್ ಲೈನ್ ಹೊಂದಿದೆ. ಹೀಗಾಗಿ ಶಿವಣ್ಣನ ಪಾತ್ರ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಇನ್ನು ಈ ಸಿನಿಮಾದಲ್ಲಿ ಶಿವಣ್ಣ ಗುರುವಿನ ಪಾತ್ರದಲ್ಲಿ ನಟಿಸುತ್ತಿರುವುದು ಚಿತ್ರದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಟ್ರೆಂಡ್ ಸೆಟ್ಟರ್ ಶಿವಣ್ಣ

ದ್ರೋಣ ಶಿವಣ್ಣ
ದ್ರೋಣ ಶಿವಣ್ಣ

ಓಂ ಚಿತ್ರದ ಲಾಂಗ್ ಹಿಡಿಯುವ ಸ್ಟೈಲ್ ಆಗಿರಬಹುದು ಜೋಗಿ ಚಿತ್ರದಲ್ಲಿ ಧರಿಸಿದ್ದ ಶರ್ಟ್ ಆಗಿರಬಹುದು ಅಥವಾ ಕಿಲ್ಲಿಂಗ್ ವೀರಪ್ಪನ್ ಸಿನಿಮಾದಲ್ಲಿ ಕಾಫಿ ಕಪ್ ಹಿಡಿದ ಶೈಲಿ ಆಗಿರಬಹುದು ಎಲ್ಲವೂ ಸಿಕ್ಕಾಪಟ್ಟೆ ಹೈಪ್ ಹಾಗೂ ಟ್ರೆಂಡ್ ಆಗಿತ್ತು. ಇನ್ನು ದ್ರೋಣ ಸಿನಿಮಾದ ಪೋಸ್ಟರ್ ನಲ್ಲಿ ಶಿವಣ್ಣ ಕೈಯಲ್ಲಿ ಪೆನ್ನು ಹಾಗೂ ಬಾಯಲ್ಲಿ ಕ್ಯಾಪ್ ಅನ್ನು ಕಚ್ಚಿರುವ ಶೈಲಿ ಕೂಡ ಟ್ರೆಂಡ್ ಆಗುತ್ತಿದೆ. ಈ ಮೂಲಕ ಶಿವಣ್ಣ ಏನೇ ಮಾಡಿದರೂ ಅದು ಟ್ರೆಂಡ್ ಆಗುತ್ತದೆ ಅನ್ನೋದು ಮತ್ತೆ ಸಾಬೀತಾಗಿದೆ.

ದ್ರೋಣ ಸಿನೆಮಾ ಗೆ ಮಹದೇವ್, ಸಂಗಮೇಶ್ ಹಾಗೂ ಶೇಷು ಬಂಡವಾಳ ಹೂಡಿದ್ದಾರೆ. ಇನ್ನು ಈ ಸ್ಪೆಷಲ್ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಆಕ್ಷನ್ ಕಟ್ ಹೇಳಿದ್ದಾರೆ.

Leave a Reply

Your email address will not be published. Required fields are marked *