ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ವೈದ್ಯರು

ವೈದ್ಯೋ ನಾರಾಯಣೋ ಹರಿಃ

ವೈದ್ಯರಿಲ್ಲದ ಜಗತ್ತನ್ನು ಎಣಿಸಲೂ ಸಾಧ್ಯವಿಲ್ಲ. ನಮ್ಮ ಜೀವ ಉಳಿಸುವ, ಆಪತ್ಬಾಂಧವನಂತೆ ಕಾಪಾಡುವ ವೈದ್ಯರಿಗೆ  “ವೈದ್ಯರ ದಿನಾಚರಣೆಯ ಶುಭಾಶಯಗಳು”.

ಚಿತ್ರರಂಗದಲ್ಲೂ ಸಾಕಷ್ಟು ರಿಯಲ್ ಡಾಕ್ಟರ್ಸ್ ಇದ್ದು, ವೈದ್ಯಕೀಯ ಕ್ಷೇತ್ರದೊಂದಿಗೆ ಚಿತ್ರರಂಗಲ್ಲೂ ಸೈ ಎನಿಸಿಕೊಂಡಿದ್ದಾರೆ. ರೀಲ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ರಿಯಲ್ ಡಾಕ್ಟರ್ಸ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಪ್ರೇಮಂ ಬೆಡಗಿ ಸಾಯಿ ಪಲ್ಲವಿ ಕೂಡ ವೈದ್ಯೆ. 2016 ರಲ್ಲಿ  ಜಾರ್ಜಿಯಾ ವಿಶ್ವವಿದ್ಯಾನಿಲಯದಿಂದ ತಮ್ಮ ವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ. ಮಲಯಾಳಂ,ತಮಿಳು, ತೆಲುಗು ಭಾಷೆಯಲ್ಲಿ ನಟಿಸಿರುವ ಈ ನ್ಯಾಚುರಲ್ ಬ್ಯೂಟಿಗೆ ಭಾರತದಾದ್ಯಂತ ತನ್ನದೇ ಆದ ಅಭಿಮಾನಿ ಬಳಗವಿದೆ.

ಡಾ. ರಾಘವೇಂದ್ರ

Dr,raghavendra,kannada movie
Dr.raghavendra

ನೆನಪಿರಲಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಚಿತ್ರದ ಡೈರೆಕ್ಟರ್ ಕೂಡ ವೈದ್ಯರು – ಡಾ.ರಾಘವೇಂದ್ರ ಇವರ ಹೆಸರು. ವೈದ್ಯಕೀಯ ವೃತ್ತಿಯಲ್ಲಿ ಸುಮಾರು ೧೫ ವರ್ಷಗಳ ಅನುಭವ ಹೊಂದಿದ್ದಾರೆ. ಕನ್ನಡ ಮೇಲಿನ ತಮ್ಮ ಭಾಷಾಭಿಮಾನ ಹಾಗೂ ಚಿತ್ರರಂಗದಲ್ಲಿ ತಮಗಿರುವ ಆಸಕ್ತಿಯಿಂದ ಇದೀಗ ಚಿತ್ರವನ್ನು ನಿರ್ದೆಶಿಸುತ್ತಿದ್ದಾರೆ.

ದಂತ ವೈದ್ಯೆ ಈ ಗಾಯಕಿ

shamitha malnad, singer
shamitha malnad

ಪ್ರಸಿದ್ಧ ಗಾಯಕಿ ಶಮಿತಾ ಮಲ್ನಾಡ್ ಬೆಂಗಳೂರಿನ ಒಕ್ಕಲಿಗರ ಡೆಂಟಿಸ್ಟ್ ಕಾಲೇಜಿನಲ್ಲಿ ತಮ್ಮ ವೈದ್ಯಕೀಯ ಪದವಿ ಪಡೆದರು. ೨೦೦೨ ರಲ್ಲಿ ಗುರುಕಿರಣ್ ಸಂಗೀತ ನಿರ್ದೇಶನದ ನಿನಗಾಗಿ ಚಿತ್ರದಲ್ಲಿ ಹಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದುವೆರೆಗೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಹಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನೃತ್ಯದಲ್ಲೂ ಸೈ ಎನಿಸಿಕೊಂಡವರು. 

ಪ್ರೊಫೇಸರ್ + ಮ್ಯೂಸಿಕ್ ಡೈರೆಕ್ಟರ್ = ಕಿರಣ್

music director, kiran thotambyle
Kiran thotambyle

ಸದ್ಯ ಎಲ್ಲರೂ ಗುನುಗುತ್ತಿರುವ ರೋಮ್ಯಾಂಟಿಕ್ ಹಾಡು “ಮಾತನಾಡಿ ಮಾಯವಾದೇ ” .. ಹಾಡಿಗೆ  ಸಂಗೀತ ನೀಡಿದ್ದು ಡಾ. ಕಿರಣ್ ತೋಟಂಬೈಲು. ಇವರು ವೈದ್ಯಕೀಯ ಹಿನ್ನೆಲೆಯಿಂದ ಬಂದ ಪ್ರತಿಭೆಗಳಿಗಿಂತ ಸ್ವಲ್ಪ ಭಿನ್ನ. ಬೆಳಿಗ್ಗೆ 9 ರಿಂದ 4 ಗಂಟೆ ವರೆಗೂ ಬೆಂಗಳೂರಿನ ಬಿ.ಜಿ.ಎಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುತ್ತಾರೆ. ಸಂಜೆ ಇವರ ಸ್ಟುಡಿಯೋದಲ್ಲಿ ಟ್ಯೂನ್ ಕಂಪೋಸ್ ಮಾಡುವುದರಲ್ಲಿ ಬ್ಯುಸಿ ಆಗಿರುತ್ತಾರೆ. ಐ.ಲವ್ ಯು ಚಿತ್ರದ ಯಶಸ್ಸಿನ ನಂತರ ಇವರಿಗೆ ಸಾಕಷ್ಟು ಆಫರ್ ಗಳು ಬರುತ್ತಿದ್ದು, ತಮಿಳು ಚಿತ್ರಕ್ಕೂ ಸಂಗೀತ ಸಂಯೋಜಿಸುವ ಅವಕಾಶ ಒದಗಿ ಬಂದಿದೆ.

ʼರಾಜುʼ ಚೆಲುವೆ ದಂತ ವೈದ್ಯೆ

apoorva gowda

2015 ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನೆಮಾ ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ಅಪೂರ್ವ ಗೌಡ – “ದಂತ ವೈದ್ಯೆ”. ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಚಿತ್ರದ ಆಡಿಷನ್ ನಲ್ಲಿ ಆಯ್ಕೆಯಾಗಿದ್ದರು. ತಮ್ಮ ಕಾಲೇಜು ದಿನಗಳಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಸೈಕಾಲಜಿಸ್ಟ್ ಅಪೂರ್ವ

apoorva arora
apoorva arora

ಅಪೂರ್ವ ಅಂದರೆ ನೆನಪಿಗೆ ಬರುವುದು “ಮುಗುಳು ನಗೆ “. ಸ್ಕ್ರೀನ್ ಮೇಲೆ ಮುದ್ದ ಮುದ್ದಾಗಿ ಅಭಿನಯ ಮಾಡುವ ಈ ನಟಿ ಸೈಕಾಲಜಿಸ್ಟ್ . ಸಿದ್ದಾರ್ಥ ಮೂಲಕ ಎಂಟ್ರಿ ಕೊಟ್ಟ ಅಪೂರ್ವ ಅರೋರ , ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳುನಗೆ ಚಿತ್ರದಲ್ಲಿ  ಕರಾವಳಿ ಹುಡುಗಿಯಾಗಿ  ತನ್ನ ಡೇರ್ ಡೆವಿಲ್ ಅಭಿನಯದಿಂದ ಸಿನಿ ರಸಿಕರ ಹೃದಯ ಗೆದ್ದಿದ್ದಾರೆ.

ಡೆಂಟಿಸ್ಟ್  ಜಾವ್ವಿ

jaavi, kannada
janvi

ಊರ್ವಿ ಚಿತ್ರದ ಮೂಲಕ ಸದ್ದು ಮಾಡಿದ್ದ ಜಾನ್ವಿ “ದಂತ ವೈದ್ಯೆ”. ಡಾ. ಜಾನ್ವಿ ನಟನೆಯ ‘ಸಾಗುತಾ ದೂರ ದೂರ’, ‘ಅವನಲ್ಲಿ ಅವಳಲ್ಲಿ’, ‘ವಿಷ್ಣು ಸರ್ಕಲ್’ ಚಿತ್ರಗಳು ರಿಲೀಸ್ ಹಂತದಲ್ಲಿದೆ.

ಡಾ. ಭಾರತಿ

dr.bharathi, jayammana maga
Dr.bharathi

ದುನಿಯಾ ವಿಜಯ್  ಅಭಿನಯಿಸಿದ್ದ ʼಜಯಮ್ಮನ ಮಗ’ ಚಿತ್ರದ ನಾಯಕಿ ಭಾರತಿಕೂಡ ಓರ್ವ ವೈದ್ಯೆ. ಜಯಮ್ಮನ ಮಗ   ಚಿತ್ರಕ್ಕೂ ಮುನ್ನ ನಟ ಕೃಷ್ಣ ಅಜೇಯ್ ರಾವ್ ಜೊತೆ ʼಕೃಷ್ಣ ಸನ್ ಆಫ್ ಸಿಎಂʼ ಚಿತ್ರದಲ್ಲಿ ನಟಿಸಿದ್ದರು.

Leave a Reply

Your email address will not be published. Required fields are marked *