ಪ್ರಾಣಿ ಪ್ರಿಯ ದಾಸನಿಗೆ ಚಿರು ದಂಪತಿಯ ಉಡುಗೊರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಅನ್ನೋದು ನಿಮಗೆಲ್ಲ ತಿಳಿದಿರುವ ವಿಚಾರ. ಸ್ಯಾಂಡಲ್ವುಡ್ ಸಾರಥಿ ಮೈಸೂರು ಮೃಗಾಲಯದ ಕೆಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿರುವುದು ಕೂಡ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.

ಸ್ನೇಹಿತರಿಗೆ ಕಷ್ಟ ಅಂತ ಬಂದರೆ ಹಿಂದು ಮುಂದು ನೋಡದೆ ಸಹಾಯ ಮಾಡುವ ಈ ಯಜಮಾನನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಹೊಸಬರ ಚಿತ್ರದ ಆಡಿಯೋ ರಿಲೀಸ್ , ಮೂಹೂರ್ತ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ. ಇನ್ನು ತನ್ನ ಆಪ್ತ ಗೆಳೆಯರಾದ ಯುವ ಸಾಮ್ರಾಟ್ ಚೀರಂಜೀವಿ ಸರ್ಜಾ ಅವರಿಗೂ ತನ್ನ ಕುಟುಂಬದ ಸದಸ್ಯನಂತೆ ಅನೇಕ ಬಾರಿ ಸಹಾಯ ಮಾಡಿದ್ದಾರೆ.

ಎಲ್ಲರನ್ನೂ ಪ್ರೀತಿಯಿಂದ ಕಾಣುವ ದಾಸನಿಗೆ ಚಿರಂಜೀವಿಸರ್ಜಾ ದಂಪತಿ ತಮ್ಮ ಮನೆಯ ಪ್ರೀತಿಯ ಭೀಮಾ ಎಂಬ ನಾಯಿಯನ್ನು ಗಿಫ್ಟಾಗಿ ನೀಡಿದ್ದಾರೆ.

ಈ ಕುರಿತು ನಟಿ ಹಾಗೂ ಚಿರಂಜೀವಿ ಸರ್ಜಾ ಅವರ ಧರ್ಮ ಪತ್ನಿಯಾದ ಮೇಘನಾರಾಜ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ “ದರ್ಶನ್ ಅವರು ನಮ್ಮ ಕುಟುಂಬಕ್ಕೆ ಮಾಡಿರುವ ಸಹಾಯಕ್ಕೆ ಇದೊಂದು ಪುಟ್ಟ ಉಡುಗೊರೆ” ಎಂದು ಬರೆದುಕೊಂಡಿದ್ದಾರೆ. https://www.instagram.com/p/Bz4m3dQnMJc/?igshid=1giiuaslixxtk

Leave a Reply

Your email address will not be published. Required fields are marked *