ಸ್ಯಾಂಡಲ್ವುಡ್ ನಲ್ಲಿ ಶುರುವಾಯ್ತು ಮತ್ತೊಂದು ಹೊಸ ಚಾಲೆಂಜ್..!

ಸೋಷಿಯಲ್ ಮೀಡಿಯಾ ಗಳಲ್ಲಿ ದಿನಕ್ಕೊಂದು ಚಾಲೆಂಜ್ ಟ್ರೆಂಡ್ ಆಗುತ್ತಲೇ ಇರುತ್ತದೆ. ಕಿಕಿ ಚಾಲೆಂಜ್, ಐಸ್ ಬಕೆಟ್ ಚಾಲೆಂಜ್ ಹೀಗೆ ಸಾಕಷ್ಟು ಚಾಲೆಂಜ್ ಗಳು ಈಗಾಗಲೇ ಬಂದು ಹೋಗಿದೆ.

ಅಂತಹದ್ದೇ ಬಾಟಲ್ ಕ್ಯಾಪ್ ಓಪನ್ ಅನ್ನೋ ಹೊಸ ಚಾಲೆಂಜ್ ಕ್ರಿಯೇಟ್ ಆಗಿದ್ದು , ಎಲ್ಲೆಡೆ ಹಲ್ ಚಲ್ ಸೃಷ್ಟಿಸುತ್ತಿದೆ.

ಅಂತಹದ್ದೇ ಬಾಟಲ್ ಕ್ಯಾಪ್ ಓಪನ್ ಅನ್ನೋ ಹೊಸ ಚಾಲೆಂಜ್ ಕ್ರಿಯೇಟ್ ಆಗಿದ್ದು , ಎಲ್ಲೆಡೆ ಹಲ್ ಚಲ್ ಸೃಷ್ಟಿಸುತ್ತಿದೆ.

ಈಗಾಗಲೇ ಹಾಲಿವುಡ್ ನ ಸೂಪರ್ ಸ್ಟಾರ್ ಫಾಸ್ಟ್ ಅಂಡ್ ಫ್ಯೂರಿಯಸ್ ಖ್ಯಾತಿಯ ಜೇಸನ್ ಹಾಗೂ ಕಿಲಾಡಿ ಅಕ್ಷಯ್ ಕುಮಾರ್ ಬಾಟಲ್ ಕ್ಯಾಪ್ ಅನ್ನ ಸುಲಭವಾಗಿ ಒದ್ದು ಓಪನ್ ಮಾಡಿದ್ದು, ನಮ್ಮ ಸ್ಯಾಂಡಲ್ ವುಡ್ ನಾಯಕರು ಕೂಡ ಸವಾಲು ಸ್ವೀಕರಿಸಿ ತಮ್ಮ ಫಿಟ್ ನೆಸ್ ಪ್ರೂವ್ ಮಾಡಿದ್ದಾರೆ.

ಸಲೀಸಾಗಿ ಬಾಟಲ್ ಓಪನ್ ಮಾಡಿದ ಗೋಲ್ಡನ್ ಗಣಿ- ಯುವ ಸಾಮ್ರಾಟ್ ಚಿರು

ನೋಡುವುದಕ್ಕೆ ಇದು ಸುಲಭದ ರೀತಿ ಕಂಡರೂ ಈ ಚಾಲೆಂಜ್ ಅಷ್ಟೊಂದು ಸುಲಭವಲ್ಲ. ಈ ಸವಾಲನ್ನ ಯಶಸ್ವಿಯಾಗಿ ಪೂರೈಸಲು ಬಹಳ ಫಿಟ್ ಆಗಿರಬೇಕು, ವಿಶೇಷ ತರಬೇತಿ ಕೂಡ ಬೇಕು. ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಬಹಳ ಸಲೀಸಾಗಿ ಬಾಟಲ್ ಕ್ಯಾಪ್ ಓಪನ್ ಮಾಡಿದ್ದಾರೆ.

ಈ ಇಬ್ಬರು ನಟರು ಬಾಟಲ್ ಕ್ಯಾಪ್ ಓಪನ್ ಮಾಡಿದ ವಿಡಿಯೋ ವನ್ನು ಇನ್ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಿದ್ದು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದು , ಎಲ್ಲೆಡೆ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *