ಸೆಂಚುರಿ ಬಾರಿಸಿದ ‘ಬೆಲ್ ಬಾಟಂ’

ಸ್ಟಿಲ್ ನಾಟ್ ಔಟ್***

bell bottom towards 125 days
Towards 125 Days… Running Successfully

ಜಯತೀರ್ಥ ನಿರ್ದೇಶನದ ರಿಷಭ್‌ ಶೆಟ್ಟಿ, ಹರಿಪ್ರಿಯ ಅಭಿನಯದ ಬೆಲ್‌ ಬಾಟಂ ಈ ವರ್ಷದ ಮೊದಲ  ಬ್ಲಾಕ್‌ ಬಸ್ಟರ್‌ ಚಿತ್ರವಾಗಿದೆ. ಉತ್ತಮ ಸಿನೆಮಾಗಳನ್ನು ಕನ್ನಡದ ಪ್ರೇಕ್ಷಕ ಪ್ರಭು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಬೆಲ್ ಬಾಟಂ ತಾಜಾ ತಾಜಾ ಉದಾಹರಣೆ.

ಈ ವರ್ಷ ತೆರೆಕಂಡಂತಹ ಬಹುತೇಕ ಸಿನೆಮಾಗಳು ಮಕಾಡೆ ಮಲಗಿವೆ. ಆದರೆ ಬೆಲ್‌ ಬಾಟಂ ಚಿತ್ರ ಇದೆಲ್ಲವನ್ನು ದಾಟಿ ನೂರು ದಿನಗಳನ್ನ ಯಶಸ್ವಿಯಾಗಿ ಪೂರೈಸಿ 125 ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಮೂಲಕ ಈ ವರ್ಷದ ಮೊದಲ  ಬ್ಲಾಕ್‌ ಬಸ್ಟರ್‌ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟಾಪ್‌ ಟೂ ಬಾಟಂ ಮನರಂಜನೆ

bell bottom kannada movie running successfully

ರೆಟ್ರೋ ಶೈಲಿಯ ಚಿತ್ರಗಳು ಎಂದೆಂದಿಗೂ ಎವರ್‌ ಗ್ರೀನ್‌ ಅನ್ನೋದನ್ನ ಬೆಲ್‌ ಬಾಟಂ ಸಾಬೀತು ಪಡಿಸಿತು. ಚಿತ್ರದ ಹಾಡುಗಳು, ಉಡುಪುಗಳು, ಪಾತ್ರಗಳ ಹೆಸರು ಎಲ್ಲವೂ ಪ್ರೇಕ್ಷರನ್ನು ರೆಟ್ರೋ ಲೋಕದಲ್ಲಿ ವಿಹರಿಸಿಕೊಂಡು ಬರುವಂತೆ ಮಾಡಿತು. 1980ರ ಧಶಕದಲ್ಲಿ ಪತ್ತೇದಾರಿ ಸಿನೆಮಾಗಳ ಹವಾ ಜೋರಾಗಿತ್ತು. ಆದರೆ ಕಾಲ ಕಳೆದಂತೆ ಪತ್ತೆದಾರಿ ಸಿನೆಮಾಗಳು ಕಡಿಮೆಯಾಗ ತೊಡಗಿದವು. ಬೆಲ್‌ ಬಾಟಂ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದೇ ತಡ ಎಲ್ಲಾ ಸಿನಿರಸಿಕರು ರೆಟ್ರೋ ಲೋಕಕ್ಕೆ ಜಾರಿದ್ದರು. ಅಷ್ಟು ಮೋಡಿ ಮಾಡಿತ್ತು ಚಿತ್ರದ ಟ್ರೇಲರ್. ಹಲವು ದಶಕಗಳಿಂದ ಪತ್ತೆದಾರಿಕೆ ಚಿತ್ರಗಳನ್ನು ಮಿಸ್‌ ಮಾಡಿಕೊಂಡಿದ್ದ ಪ್ರೇಕ್ಷಕರು ಬೆಲ್‌ ಬಾಟಂ ಚಿತ್ರ ನೋಡಿದ ನಂತರ ಅವರಿಗೆ ಪತ್ತೆದಾರಿಕೆಯ ಹಾಗೂ ರೆಟ್ರೋ ಮಜಾ ಮತ್ತೆ ದೊರಕಿತು.   

ಡಿಟೆಕ್ಟೀವ್‌ ಪಾತ್ರದಲ್ಲಿ ರಿಷಭ್‌ ಕಮಾಲ್‌

jayathirtha bell bottom

ನಿರ್ದೇಶಕನಾಗಿ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿದ್ದ ರಿಷಭ್‌ ಶೆಟ್ಟಿ ಈ ಚಿತ್ರದ ಮೂಲಕ ನಾಯಕ ನಟನಾದರು. ಈ ಮೂಲಕ ತಾವೊಬ್ಬ ಆಲ್‌ ರೌಂಡರ್‌ ಎಂದು ಸಾಬೀತು ಪಡಿಸಿದರು. ಈ ಚಿತ್ರದಲ್ಲಿ ಡಿಟೆಕ್ಟೀವ್‌ ದಿವಾಕರನಾಗಿ ತಮ್ಮ ಪ್ರತಿಭೆಯ ಮತ್ತೊಂದು ಮಜಲನ್ನು ಸಮರ್ಥವಾಗಿ ಅನಾವರಣಗೊಳಿಸಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ದಿವಾಕರ   ತನ್ನ ಪತ್ತೇದಾರಿ ಕೈಚಳಕದಿಂದ ಭೇದಿಸುವ ರೀತಿ ಕ್ಷಣಕ಼್ಣಕ್ಕೂ ಕುತೂಹಲ ಮೂಡಿಸುತ್ತದೆ. ಈ ಕಾರಣದಿಂದಲೇ ಥಿಯೇಟರ್‌ ನಿಂದ ಬಂದ ನಂತರವೂ ಪ್ರೇಕ್ಗಕರನ್ನು ಮೊತ್ತೊಮ್ಮೆ ಥಿಯೇಟರ್‌ ನತ್ತ   ತೆರಳಲು ಪ್ರೇರೇಪಿಸುತ್ತದೆ..

‘ಜಯದ ತೀರ್ಥ’ ಕುಡಿಯಲು ಇವರೇ ಕಾರಣ

ಜಯತೀರ್ಥ ಅವರ ಚಿತ್ರ ಅಂದರೆ ಹೊಸತನ ಅಂತು ಖಂಡಿತ ಇದ್ದೇ ಇರುತ್ತದೆ. ಇದು ಬೆಲ್‌ ಬಾಟಂ ಚಿತ್ರದಲ್ಲೂ ಕೂಡ ಮುಂದುವರೆದಿದೆ. ಈಗಿನ ಕಾಲದಲ್ಲಿ ಒಂದು ರೆಟ್ರೋ ಶೈಲಿಯ ಸಿನೆಮಾ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಎಲ್ಲಿಯೂ ಚೆದುರದಂತೆ ಎಲ್ಲವೂ ಎಲ್ಲರಿಗೂ ಆಪ್ತವಾಗುವಂತೆ ಚಿತ್ರವನ್ನ ಜಯತೀರ್ಥ ಕಟ್ಟಿಕೊಟ್ಟಿದಾರೆ. ಹೀಗಾಗಿಯೇ ಚಿತ್ರಕ್ಕೆ ಜಯದ ತೀರ್ಥ ದೊರಕಿದೆ.

ವಿಚಿತ್ರ ಹೆಸರುಗಳೂ ಕೂಡ ಸಕ್ಸಸ್ ಗೆ ಕಾರಣ

ಚಿತ್ರದ ನಾಯಕಿ ಹರಿಪ್ರಿಯ ಕೂಡ ರೆಟ್ರೋ ಲುಕ್ಕಿನಲ್ಲಿ ಇಷ್ಟವಾಗುತ್ತಾರೆ. ಇನ್ನುಳಿದಂತೆ ಸೆಗಣಿ ಪಿಂಟೋ, ಮರಕುಟುಕ ಮುಂತಾದ ವಿಲಕ್ಷಣ ಹೆಸರುಗಳೇ ಈ ಚಿತ್ರದ ಹೈಲೈಟ್ಸ್‌ ಹಾಗೂ ಬೋನಸ್‌ ಪಾಯಿಂಟ್‌. ಪಾತ್ರದ ಹೆಸರುಗಳು ಜನರ ತಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ಇನ್ನು ಈ ಥ್ರಿಲ್ಲಿಂಗ್‌ ಕಥೆ ಬರೆದಿದ್ದು ಟಿ.ಕೆ.ದಯಾನಂದ್‌  ಹಾಗೆಯೇ ಚಿತ್ರದ ಸಂಭಾಷಣೆ ಬರೆದಿದ್ದು ರಘು ನಿಡುವಳ್ಳಿ. ಬೆಲ್‌ ಬಾಟಂ ಕ್ರೇಜ್‌ ಇನ್ನು ನಿಂತಿಲ್ಲ, ಯಶಸ್ವಿಯಾಗಿ 100 ದಿನ ಪೂರೈಸಿರುವ ಈ ಚಿತ್ರ 125ನೇ ದಿನಕ್ಕೆ ದಾಪುಗಾಲು ಇಡುತ್ತಿದೆ. ಈ ಚಿತ್ರ ದ್ವಿಶತಕ ಬಾರಿಸಲಿ ಎಂಬುದೇ ನಮ್ಮ ಆಶಯ…..

Leave a Reply

Your email address will not be published. Required fields are marked *