ಎಂದೆಂದಿಗೂ ರಂಗಿತರಂಗ – 4 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಎವರ್ ಗ್ರೀನ್ ಸಿನೆಮಾ

2006 ರಲ್ಲಿ ಮುಂಗಾರುಮಳೆ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದರೆ, 2015 ರಲ್ಲಿ ಕನ್ನಡ ಚಿತ್ರದ ಮಾರುಕಟ್ಟೆಯನ್ನು ಸಪ್ತ ಸಾಗರದಾಚೆ ವಿಸ್ತರಿಸಿದ್ದು ಹೆಮ್ಮೆಯ ರಂಗಿತರಂಗ.

Rangitaranga, Anup bhandaari
ರಂಗಿತರಂಗ

ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ

ರಂಗಿತರಂಗ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನದ ಪ್ರದರ್ಶನ ನೋಡಿ ಬಂದ ಹಲವರು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಈ ಚಿತ್ರ ಹೆಚ್ಚು ದಿನ ಓಡೋಡಿಲ್ಲ ಎಂದಿದ್ದರು. ಆದರೆ ಇದೇ ರಂಗಿತರಂಗ ಬಳಿಕ ಬಾಹುಬಲಿ, ಭಜರಂಗಿ ಭಾಯಿಜಾನ್ ನಂತಹ ದೊಡ್ಡ ಚಿತ್ರಗಳ ಎದುರು ಸೆಣಸಿ ಗೆದ್ದದ್ದು, 50 ವಾರಗಳ ಪ್ರದರ್ಶನ ಕಂಡು ಗೋಲ್ಡನ್ ಜ್ಯುಬಿಲಿ ಆಚರಿಸಿದ್ದು ಈಗ ಇತಿಹಾಸ.

4 ವರ್ಷದಿಂದ ಅನೇಕರ ಕಾಲರ್ ಟ್ಯೂನ್


ಹೌದು ಕರೆಯೋಲೆ, ಡೆನ್ನಾನ ಡೆನ್ನಾನ , ಈ ಸಂಜೆ ಏಕೆ ಜಾರುತ್ತಿದೆ ಹೇಗೆ ರಂಗು ರಂಗಿನ ರಂಗಿತರಂಗ ಚಿತ್ರದ ಹಾಡುಗಳು ಇಂದಿಗೂ ಅನೇಕರ ಕಾಲರ್ ಟ್ಯೂನ್ ಆಗಿದೆ. ಇನ್ನು ಕೆಲವರು ರಂಗಿತರಂಗ ಸಿನೆಮಾವನ್ನು ತಮ್ಮ ಲ್ಯಾಪ್ ಟಾಪ್ ಗಳಲ್ಲಿ ಆಗಾಗ ವೀಕ್ಷಿಸುತ್ತಾರೆ. ರಂಗಿತರಂಗ ಕನ್ನಡದ ಎವರ್ ಗ್ರೀನ್ ಚಿತ್ರ ಅಂದ್ರೆ ತಪ್ಪಾಗಲಾರದು.

ಆಸ್ಕರ್ ನಾಮ ನಿರ್ದೇಶನ..!

2015 ರಲ್ಲಿ ಆಸ್ಕರ್ ನಾಮನಿರ್ದೇಶನ ಗಳಿಗಾಗಿ ಆಯ್ಕೆಯಾದ 305 ಚಿತ್ರಗಳ ಪಟ್ಟಿಯಲ್ಲಿ ರಂಗಿತರಂಗ ಕೂಡ ಸೇರಿತ್ತು.

ಸಪ್ತ ಸಾಗರದಾಚೆ, ಬಾಕ್ಸ್ ಆಫೀಸ್ ನಲ್ಲಿ ಹೊಸ ಅಲ್ ಎಬ್ಬಿಸಿದ್ದೇ ರಂಗಿತರಂಗ

ಯು.ಎಸ್. ಎ , ಯೂರೋಪ್, ಸಿಂಗಾಪೂರ್, ಆಸ್ಟ್ರೇಲಿಯಾ, ಕೆನಡಾ ಹೀಗೆ ಮುಂತಾದ ದೇಶಗಳಲ್ಲಿ ತೆರೆ ಕಂಡು ಭಾರಿ ಪ್ರಶಂಸೆ ಗಳಿಸಿತ್ತು. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಮಟ್ಟದ ಕಲೆಕ್ಷನ್ ಮಾಡಿ, ವಿದೇಶದಲ್ಲಿ ಕನ್ನಡದ ಕಂಪನ್ನು ಪಸರಿಸಿತು.

ಚಿತ್ರದಲ್ಲಿ ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಡೈಲಾಗ್ ಕಿಂಗ್ ಸಾಯಿಕುಮಾರ್ ಹೀಗೆ ಎಲ್ಲರೂ ತಮ್ಮ ಪಾತ್ರದಲ್ಲಿ ಮಿಂಚಿದ್ದರು.

ರಂಗಿತರಂಗ ಕನ್ನಡದ ಹೆಮ್ಮೆಯ ಸಿನೆಮಾ. ಚಿತ್ರ ಬಿಡುಗಡೆಯಾಗಿ ಇಂದಿಗೆ 4 ವರ್ಷ ಆಗಿದ್ದರು, ಚಿತ್ರದ ಹವಾ ಒಂದು ನಯಾ ಪೈಸೆ ಕಮ್ಮಿ ಆಗಿಲ್ಲ. ಇಂತಹ ಮಹಾನ್ ಚಿತ್ರವನ್ನು ಭಾರತೀಯ ಚಿತ್ರರಂಗಕ್ಕೆ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಸಿನಿ ಕಟ್ಟೆ ತಂಡದಿಂದ ಹ್ಯಾಟ್ಸಾಫ್.

Leave a Reply

Your email address will not be published. Required fields are marked *